ಪಂ. ಜಾಲೀಹಾಳ ಶ್ರೀನಿವಾಸಾಚಾರ್ಯರ ಪುಣ್ಯ ಸ್ಮರಣೆ: ಕಾಶಿಯಿಂದ 3 ದಿನಗಳ ಆನ್‌ಲೈನ್ ಗೀತಾ ಜ್ಞಾನ ಯಜ್ಞ
ಧಾರವಾಡ:ಪಂಡಿತರಾಜ ಜಾಲೀಹಾಳ ಶ್ರೀನಿವಾಸಾಚಾರ್ಯರ 45ನೇ ವರ್ಷದ ಪುಣ್ಯತಿಥಿ ಹಾಗೂ ಶ್ರೀ ಗೀತಾ ಜಯಂತಿ ನಿಮಿತ್ತ ಮೂರು ದಿನಗಳ ಕಾಲ ‘ಶ್ರೀ ಭಗವದ್ಗೀತಾ ಜ್ಞಾನ ಯಜ್ಞ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಶೀ ಕ್ಷೇತ್ರದ ವಾರಣಾಸಿಯ ಪಂ. ಸುಕೇಶಾಚಾರ್ಯ ಜಾಲೀಹಾಳ ಅವರು ನಾಳೆಯಿಂದ (ನವೆಂಬರ್ 30) ಡಿಸೆಂಬರ್ 2 ರವರೆಗೆ ಆನ್‌ಲೈನ್ ಮೂಲಕ ಉಪನ್ಯಾಸ ನೀಡಲಿದ್ದಾರೆ. ಈ ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6:30 ರಿಂದ 7:30 ರವರೆಗೆ ಶ್ರೀ ಭಗವದ್ಗೀತೆಯ ಸಾರ ಮತ್ತು ಶ್ರೀ ಗುರು ವೈಭವ ಕಾವ್ಯ…

