ಕೆರೆ ನೀರಿಗೆ ಯೂರಿಯಾ ಮಿಶ್ರಣ: ಏಳು ಕುರಿಗಳ ದಾರುಣ ಸಾವು, ಕುರಿಗಾಯಿಯ ಕಣ್ಣೀರು
ಹನೂರು: ಕುರಿ ಮೇಯಿಸಿ ಜೀವನ ಸಾಗಿಸುತ್ತಿದ್ದ ಬಡ ರೈತನೊಬ್ಬನ ಹೊಟ್ಟೆಯ ಮೇಲೆ ಕಿಡಿಗೇಡಿಗಳು ಹೊಡೆದಿದ್ದಾರೆ. ಕುರಿಗಳು ಕುಡಿಯುವ ನೀರಿಗೆ ಅಪರಿಚಿತರು ಯೂರಿಯಾ ಮಿಶ್ರಣ ಮಾಡಿದ ಪರಿಣಾಮ, ನೀರು ಕುಡಿದ ಏಳು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹನೂರು ತಾಲ್ಲೂಕಿನ ಡಿ. ವಿಲೇಜ್‌ನ ಬೂದಿಕೆರೆ ಬಳಿ ಸಂಭವಿಸಿದೆ. 75 ಅರಬಗೆರೆ ಗ್ರಾಮದ ನಿವಾಸಿ ಮುತ್ತೇಗೌಡ ಬಿನ್ ಕರಗೆಗೌಡ ಎಂಬುವವರಿಗೆ ಸೇರಿದ ಕುರಿಗಳು ಈ ಮಾರಣಹೋಮಕ್ಕೆ ಬಲಿಯಾಗಿವೆ. ಮುತ್ತೇಗೌಡ ಅವರು ಪ್ರತಿದಿನದಂತೆ ಸೋಮವಾರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುರಿ…

