ಮಕ್ಕಳನ್ನೇ ಜೋಡೆತ್ತುಗಳನ್ನಾಗಿ ಮಾಡಿಕೊಂಡ ರೈತ: ರಾಣೆಬೇನ್ನೂರ ತಾ: ವೆಂಕಟಾಪೂರದ ದೃಶ್ಯ ಸರ್ಕಾರದ ಕಣ್ಣು ತೆರೆಯಬೇಕಿದೆ

ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಆಗ್ರಹ ಹಾವೇರಿ: ಎಲೆಕೋಸು ಬೆಳೆಯ ಮಧ್ಯೆ ಬೆಳೆದ ಕಳೆ ನಾಶ ಮಾಡಲು ಇಬ್ಬರು ಪುಟ್ಟ ಮಕ್ಕಳು ಜೋಡೆತ್ತುಗಳಂತೆ ನೊಗ ಹೊತ್ತು ಹೊಲದಲ್ಲಿ ಸಾಗುತ್ತಿದ್ದರೆ, ಅವರ ಹಿಂದೆ ತಂದೆ ಎಡೆಕುಂಟೆ ಹಿಡಿದು ನಡೆಯುತ್ತಿರುವ ದೃಶ್ಯ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ಕಂಡುಬಂದಿದೆ. ಆಧುನಿಕ ಕೃಷಿ, ರೈತರ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣದ ಬಗ್ಗೆ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಮಾತನಾಡುತ್ತಿರುವ ಈ ಕಾಲಘಟ್ಟದಲ್ಲಿಯೂ ರೈತ…

Read More

ಸವಣೂರ:ನಿಧಿ ಆಸೆಗೆ ದೇವಸ್ಥಾನ ಧ್ವಂಸ ಆರೋಪ: ನಾಲ್ವರು ಬಂಧನ, ನ್ಯಾಯಾಂಗ ವಶಕ್ಕೆ

ಹಾವೇರಿ: ನಿಧಿ ಸಿಗುವ ಆಸೆಯಿಂದ ಮೂಕಬಸವೇಶ್ವರ ಹಾಗೂ ಈಶ್ವರಮೂರ್ತಿ ಪ್ರತಿಷ್ಠಾಪಿತವಾಗಿದ್ದ ಕಲ್ಲಿನ ದೇವಸ್ಥಾನವನ್ನು ಧ್ವಂಸಗೊಳಿಸಿ ನೆಲ ಅಗೆದ ಆರೋಪದಡಿ ನಾಲ್ವರನ್ನು ಸವಣೂರು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ನದಿನೀರಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನದಿನೀರಲಗಿ ಗ್ರಾಮದ ಫಕ್ಕಿರಪ್ಪ ಮಾದರ ಅವರ ಜಮೀನಿನಲ್ಲಿರುವ ಮೂಕಬಸವೇಶ್ವರ ಹಾಗೂ ಈಶ್ವರಮೂರ್ತಿಯ ಸಣ್ಣ ಕಲ್ಲಿನ ದೇವಸ್ಥಾನವನ್ನು ನಿಧಿ ಹುಡುಕುವ ಉದ್ದೇಶದಿಂದ ಧ್ವಂಸ ಮಾಡಲಾಗಿದೆ ಎಂದು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು…

Read More

ಶಿಕ್ಷಕರ ಕೊರತೆ: ರಾಣೇಬೆನ್ನೂರ ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಶಾಲೆ ಬಂದ್ ಮಾಡಿ ಪ್ರತಿಭಟನೆ

ರಾಣೇಬೆನ್ನೂರ: ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಪಾಲಕರು, ಪೋಷಕರು, ಶಾಲಾ ಮಕ್ಕಳು ಹಾಗೂ ಎಸ್‌ಡಿಎಂಸಿ ಸದಸ್ಯರು ಬುಧವಾರದಂದು ಶಾಲೆ ಬಂದ್ ಮಾಡಿ ಸುಮಾರು ನಾಲ್ಕು ಗಂಟೆಗಳ ಕಾಲ ತೀವ್ರ ಪ್ರತಿಭಟನೆ ನಡೆಸಿದರು. ಒಂದರಿಂದ ಎಂಟನೇ ತರಗತಿವರೆಗೆ ಒಟ್ಟು 111 ಮಕ್ಕಳು ಕಲಿಯುತ್ತಿದ್ದು, ದೀರ್ಘಕಾಲದಿಂದ ಕಾಡುತ್ತಿರುವ ಶಿಕ್ಷಕರ ಕೊರತೆಯಿಂದಾಗಿ ಪಾಠ ಬೋಧನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದು ಮಕ್ಕಳ ಭವಿಷ್ಯದ…

Read More

ಶಿಗ್ಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಬರ್ಬರ ಹತ್ಯೆ; ಸಹೋದರ ಬಂಧನ

ಶಿಗ್ಗಾವಿ: ಪಟ್ಟಣದ ಗುಡ್ಡದ ಓಣಿಯ ಅಂಗನವಾಡಿ ಕೇಂದ್ರ-3ರಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬರ್ಬರ ಹತ್ಯೆ ಪ್ರಕರಣವು ಜನತೆಯನ್ನು ಬೆಚ್ಚಿಬೀಳಿಸಿದೆ. 29 ವರ್ಷದ ಅಂಗನವಾಡಿ ಕಾರ್ಯಕರ್ತೆ ಸುಮಾ ಶಿವಶಂಕರ ಸವಣೂರ (ಊರ್ಫ್ ವನಹಳ್ಳಿ) ಅವರನ್ನು ಅವರ ಸಹೋದರನೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಬೆಳಿಗ್ಗೆ ಸುಮಾ ಅವರು ಎಂದಿನಂತೆ ಅಂಗನವಾಡಿ ಕೇಂದ್ರ ತೆರೆಯಲು ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಿಯರ ಹಾಗೂ ವೈಯಕ್ತಿಕ ಕಾರಣಗಳಿಂದ ಉಂಟಾದ ಕಲಹದ ಹಿನ್ನೆಲೆ ಆರೋಪಿ ಸಂಜು…

Read More

ಅಹಿಂಸಾ ಮಾರ್ಗದಿಂದ ಮಾತ್ರ ಜೀವನದಲ್ಲಿ ನೆಮ್ಮದಿ ಸಾಧ್ಯ: ಪತ್ರಕರ್ತ ಗೋಣೆಪ್ಪ ದೀಪಾವಳಿ ಅಭಿಮತ

ರಾಣೇಬೆನ್ನೂರ: ಇಲ್ಲಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕಾ ಆಡಳಿತ ಮತ್ತು ವಿವಿದ ಸಂಘಟನೆಗಳ ವತಿಯಿಂದ ಶುಕ್ರವಾರ ಭಗವಾನ ಗೌತಮ ಬುದ್ಧರ ಜಯಂತಿಯನ್ನು ಆಚರಿಸಲಾಯಿತು. ಪತ್ರಕರ್ತ ಗೋಣೆಪ್ಪ ದೀಪಾವಳಿ ಈ ವೇಳೆ ಭಗವಾನ ಗೌತಮ ಬುದ್ಧರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಅಹಿಂಸಾ ಮಾರ್ಗವನ್ನು ಪ್ರತಿಪಾದಿಸಿದ ಭಗವಾನ ಗೌತಮ ಬುದ್ಧರು ಪ್ರಾಣಿಗಳ ಹಿಂಸೆ ಮಾಡಬಾರದು ಮಹಾಪಾಪ, ಸಕಲ ಜೀವಿಗಳ ಮೇಲೆ ದಯವಿರಬೇಕು ಎಂದು ಬೋಧಿಸಿದವರು ಅವರ ವಿಚಾರ ಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಗಾಗ ಮಾತ್ರ ಜಯಂತಿಗೆ…

Read More

ಲಾರಿ ಕ್ಲೀನರ್ ಸ್ಕೆಚ್‌ಗೆ ಖದೀಮರು ಫಿದಾ: ಮೋಟೆಬೆನ್ನೂರು ಹೆದ್ದಾರಿ ದರೋಡೆ ಪ್ರಕರಣದ 9 ಆರೋಪಿಗಳ ಬಂಧನ

ಹಾವೇರಿ: ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇತ್ತೀಚೆಗೆ ನಡೆದಿದ್ದ ಸಿನೆಮಾ ಮಾದರಿಯ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಹಾವೇರಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 40 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಥಾರ್ ಮತ್ತು ಸ್ವಿಫ್ಟ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋಧಾ ವಂಟಗೋಡಿ ಅವರು ಈ ಕುರಿತು…

Read More

ಮಾತೃಶ್ರಿ. ಹೇಮಾವತಿ ವಿ. ಹೆಗ್ಗಡೆ ಜನ್ಮದಿನ: ನಿರ್ಗತಿಕರಿಗೆ ಹಣ್ಣು-ಹಂಪಲ ವಿತರಣೆ

​ರಾಣೇಬೆನ್ನೂರ : ತಾಲ್ಲೂಕಿನ ಹೊಳೆ ಆನ್ವೇರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ವಾತ್ಸಲ್ಯ’ ಯೋಜನೆಯಡಿ ತಾಲೂಕಿನ ಹೊಳೆ ಆನ್ವೇರಿ ಗ್ರಾಮದ ಅಸಹಾಯಕ ಸದಸ್ಯರಿಗೆ ಹಾಗೂ ನೂತನ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಲಾಯಿತು. ​ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಮಂಜುನಾಥಗೌಡ ಎಂ. ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿ ಹಾಗೂ ನಿರ್ಗತಿಕರ ಏಳಿಗೆಗಾಗಿ ಹತ್ತು…

Read More

ಪ್ರಾಮಾಣಿಕತೆ ಮೆರೆದ ಸಾರಿಗೆ ನಿರ್ವಾಹಕಿ: ಮಹಿಳೆಗೆ ಮರಳಿ ಸಿಕ್ಕ ಮೊಬೈಲ್

ರಾಣೇಬೆನ್ನೂರ: ಬಸ್ಸಿನಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ ಮೊಬೈಲ್ ಫೋನನ್ನು ಮಹಿಳೆಯೊಬ್ಬರಿಗೆ ಮರಳಿಸುವ ಮೂಲಕ ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ​ತಾಲೂಕಿನ ಮೈದೂರು ಗ್ರಾಮದ ಕೆಂಚವ್ವ ಹರಿಜನ ಎಂಬ ಮಹಿಳೆಯು ಬೆಳಿಗ್ಗೆ ರಾಣೇಬೆನ್ನೂರಿನಿಂದ ಚಂದಾಪುರಕ್ಕೆ ಹೊರಡುವ ಬಸ್ಸಿನಲ್ಲಿ ಹೊನ್ನತ್ತಿಗೆ ತೆರಳಲು ಹತ್ತಿದ್ದರು. ಹೊನ್ನತ್ತಿಯಲ್ಲಿ ಬಸ್ ಇಳಿಯುವ ಸಂದರ್ಭದಲ್ಲಿ ಅವರು ಅರಿಯದೇ ತಮ್ಮ ಮೊಬೈಲ್ ಫೋನನ್ನು ಸೀಟಿನಲ್ಲಿಯೇ ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕಿ…

Read More

​ಮಹಿಳೆಯರನ್ನು ಗೌರವಿಸುವ ಸಮಾಜದಲ್ಲಿ ನೆಮ್ಮದಿ ಸಾಧ್ಯ: ಆರ್.ಸಿ. ಪಾಟೀಲ್

ರಾಣೇಬೆನ್ನೂರ: ಎಲ್ಲಿ ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತಾರೋ, ಅಲ್ಲಿ ಸುಸಂಸ್ಕೃತ ಹಾಗೂ ನೆಮ್ಮದಿಯ ವಾತಾವರಣ ಇರುತ್ತದೆ. ಪ್ರತಿಯೊಬ್ಬರೂ ಮಹಿಳೆಯರನ್ನು ಪೂಜಿಸುವ ಮತ್ತು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಆರ್.ಸಿ. ಪಾಟೀಲ್ ಹೇಳಿದರು. ನಗರದ ಹೊರವಲಯದ ಮಾಗೋಡ ರಸ್ತೆಯಲ್ಲಿರುವ ಸಾರಿಗೆ ಘಟಕದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣನ್ನು ಅಬಲೆಯೆಂದು ಹಿಯಾಳಿಸಬಾರದು. ಜನ್ಮ ನೀಡಿದ ತಾಯಿಯಿಂದ ಹಿಡಿದು ರವಿವಾರದಂದು…

Read More

ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹ: ಕ್ರಮಕ್ಕೆ ಆಗ್ರಹಿಸಿ ಸ್ವಾಭಿಮಾನಿ ಕರವೇ ಪ್ರತಿಭಟನೆ

ರಾಣೇಬೆನ್ನೂರು: ತಾಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿರುವ ಇಂತಹ ದಂಧೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ​ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ತಾಲೂಕಿನಾದ್ಯಂತ ಹೆಚ್.ಪಿ, ಇಂಡಿಯನ್ ಹಾಗೂ ಭಾರತ ಗ್ಯಾಸ್ ಏಜೆನ್ಸಿಗಳು ಸೇರಿದಂತೆ ವಿವಿಧ ಸಂಸ್ಥೆಗಳು ಎಲ್ಲೆಂದರಲ್ಲಿ…

Read More