
ಹುಬ್ಬಳ್ಳಿ-ವರೂರ: ವಿಶ್ವನಾಯಕ ಹಾಗೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನ ಹಾಗೂ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ 52ನೇ ಜನ್ಮ ಜಯಂತಿಯ ಶುಭ ಸಂದರ್ಭದಲ್ಲಿ ‘ರಾಷ್ಟ್ರಕ್ಕಾಗಿ ರಕ್ತದಾನ’ ಎಂಬ ಘೋಷವಾಕ್ಯದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 20, 2025, ಶನಿವಾರ
ಸಮಯ: ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00 ರವರೆಗೆ
ಸ್ಥಳ: ಎ.ಜಿ.ಎಂ ಮಹಾವಿದ್ಯಾಲಯ, ನವಗ್ರಹ ತೀರ್ಥ ಸುಕ್ಷೇತ್ರ, ವರೂರನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಎಂ.ಆರ್. ಪಾಟೀಲ ಅವರು ಈ ಕುರಿತು ಮಾತನಾಡಿ, ರಕ್ತದಾನ ಮಾಡುವುದರಿಂದ ಹಲವು ಉಪಯೋಗಗಳಿವೆ. ರಕ್ತದಾನವು ಜೀವ ಉಳಿಸುವ ಮಹಾನ್ ಕಾರ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಈ ಶಿಬಿರವು ಕೆ.ಎಂ.ಸಿ ರಕ್ತ ಭಂಡಾರದ ಸಹಯೋಗದಲ್ಲಿ ನಡೆಯಲಿದೆ. ಎಲ್ಲರೂ ಈ ಮಹತ್ತರ ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

