
ಹುಬ್ಬಳ್ಳಿ: ಜೆಸಿಬಿ ಕಾರ್ಯಾಚರಣೆಯ ದರವನ್ನು ಹೆಚ್ಚಿಸಬೇಕು ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿ ಜೆಸಿಬಿ ಮಾಲೀಕರ ಸಂಘ (ರಿ.)ವು ನವೆಂಬರ್ 12 ರಿಂದ 16 ರವರೆಗೆ ಐದು ದಿನಗಳ ಕಾಲ ನಗರ ವ್ಯಾಪ್ತಿಯಲ್ಲಿ ಜೆಸಿಬಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಅಮರನಾಥ ಜಗಳೂರ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೆಸಿಬಿ ಯಂತ್ರಗಳ ಬಿಡಿಭಾಗಗಳ ದರ, ಎಣ್ಣೆ (ಆಯಿಲ್) ಮತ್ತು ಡೀಸೆಲ್ ದರಗಳು ಗಣನೀಯವಾಗಿ ಹೆಚ್ಚಾಗಿವೆ. ಈ ಕಾರಣಗಳಿಂದಾಗಿ ಈಗಿರುವ ದರದಲ್ಲಿ ಕಾರ್ಯಾಚರಣೆ ಮುಂದುವರಿಸುವುದು ಮಾಲೀಕರಿಗೆ ಭಾರೀ ನಷ್ಟ ಉಂಟುಮಾಡುತ್ತಿದೆ. ದರ ಪರಿಷ್ಕರಣೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಹಿನ್ನೆಲೆ, ಜೆಸಿಬಿ ಕಾರ್ಯಾಚರಣೆಯ ಪ್ರತಿ ಗಂಟೆಯ ದರವನ್ನು ₹1100ಕ್ಕೆ ನಿಗದಿ ಮಾಡಬೇಕು ಎಂಬ ಒತ್ತಾಯದೊಂದಿಗೆ ಸಂಘವು ಈ ಹೋರಾಟ ಆರಂಭಿಸಿದೆ. ಐದು ದಿನಗಳ ಈ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ ಯಾವುದೇ ಜೆಸಿಬಿ ಯಂತ್ರ ಕಾರ್ಯಾಚರಣೆಯಲ್ಲಿ ತೊಡಗುವುದಿಲ್ಲ ಎಂದು ಸಂಘ ತಿಳಿಸಿದೆ. ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಸಂಘದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಉಪಾಧ್ಯಕ್ಷ ಶೇಖಪ್ಪಾ ಹಾಳಕೇರಿ, ಕಾರ್ಯದರ್ಶಿ ರಿಯಾದ ಸವದತ್ತಿ, ಸಹ ಕಾರ್ಯದರ್ಶಿ ಸಮೋಹ ಮಾದ, ಖಜಾಂಚಿ ಲಕ್ಷ್ಮಣ ಪೂಜಾರ, ಸಂಘಟನಾ ಕಾರ್ಯದರ್ಶಿ ಬಸವರಾಜ ಲದ್ದಿ ಸೇರಿದಂತೆ ಸಂಘದ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


I don’t think the title of your article matches the content lol. Just kidding, mainly because I had some doubts after reading the article.