ಅಸ್ತೂರು ಗ್ರಾಮದ ನೂತನ ದೇವಾಲಯಕ್ಕೆ ಮಾಜಿ ಶಾಸಕ ಆರ್. ನರೇಂದ್ರ ಭೇಟಿ: ಭಕ್ತಿಪೂರ್ವಕ ಉದ್ಘಾಟನೆ
ಹನೂರು: ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಭಕ್ತರಿಗೆ ಸಮರ್ಪಣೆ ಮಾಡುವುದರಿಂದ ಆಯಾ ಭಾಗದಲ್ಲಿ ಉತ್ತಮ ಸಂಸ್ಕಾರ ಹಾಗೂ ಆರೋಗ್ಯವಂತ ವಾತಾವರಣ ನಿರ್ಮಾಣವಾಗಲಿದೆ ಎಂದು ಮಾಜಿ ಶಾಸಕ ಆರ್. ನರೇಂದ್ರ ಅವರು ಅಭಿಪ್ರಾಯಪಟ್ಟರು. ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಶನಿಶ್ವರ ಸ್ವಾಮಿ, ಜೆಡೆಶ್ವರ ಸ್ವಾಮಿ ಹಾಗೂ ಪಡಗಲ ಮಾದೇಶ್ವರ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು. ಕಾಡಂಚಿನ ಪುಟ್ಟ ಗ್ರಾಮದಲ್ಲಿ ಇಷ್ಟೊಂದು ಸುಂದರವಾದ…

