ಹಾವೇರಿಯಲ್ಲಿ ‘ಹಂಚು’ ಸರಿಸಿದ ಕಿಲಾಡಿ ಕಳ್ಳರು: 15 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ,
ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗ್ರಾಮದಲ್ಲಿ ಅತಿಮಾನುಷ ರೀತಿಯಲ್ಲಿ ಮನೆಯೊಳಗೆ ನುಗ್ಗಿರುವ ಕಳ್ಳರು ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ಮನೆಗೆ ಹಾಕಿರುವ ದುಬಾರಿ ಬೀಗಗಳು ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ನಾಗರಿಕರು ಹೆಮ್ಮೆಪಡುವ ಕಾಲದಲ್ಲಿ, ಕಳ್ಳರು ಈ ಬಾರಿ ಆರಿಸಿಕೊಂಡಿದ್ದು ಮನೆಯ ಅತ್ಯಂತ ದುರ್ಬಲ ಭಾಗವಾದ ‘ಮೇಲ್ಛಾವಣಿ’ಯನ್ನು! ಅಡುಗೆ ಮನೆಯೇ ಕಳ್ಳರ ರಹದಾರಿ! ಹಿರೂರು ಗ್ರಾಮದ ನಿವಾಸಿ ಮೊಹಮ್ಮದ್ ಗೌಸ್ ಎಂಬುವವರ ಮನೆಯಲ್ಲಿ ಈ ಸಿನೆಮಾ…

