ದೇಶಾಭಿಮಾನಕ್ಕೆ ಸೇವಾ ಮನೋಭಾವ ಬೆಳೆಸಿಕೊಳ್ಳಿ’: ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಕರೆ
ಕುಂದಗೋಳ: ಇಂದಿನ ಮಕ್ಕಳಲ್ಲಿ ನಮ್ಮ ದೇಶದ ಪ್ರಜ್ಞೆಯನ್ನು ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳು ನಿಸ್ವಾರ್ಥದಿಂದ ದೇಶಕ್ಕಾಗಿ ಶ್ರಮಿಸುವಂತಹವರಾಗಬೇಕು. ಭಾರತ ಮಾತೆಯ ಸೇವಕರಾದರೆ ಭಾರತದ ಒಳ್ಳೆಯ ರತ್ನಗಳಾಗಬಹುದು. ಆದ್ದರಿಂದ ಈ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಭಾವೈಕ್ಯತಾ ಸಂಸ್ಥಾನ ಮಠದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಅವರು ತಾಲ್ಲೂಕಿನ ಸಂಶಿ ಗ್ರಾಮದ ಶ್ರೀ ಜ. ಫಕೀರೇಶ್ವರ ಮಠದಲ್ಲಿ ಶಿಕ್ಷಣ ಸಮಿತಿಯ ಕುಂದಗೋಳದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ವರ್ಷದ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್)…

