ಜಾನುವಾರು ರೋಗ ನಿರ್ಮೂಲನೆ ಗುರಿ: ನ. 3 ರಿಂದ ಕಾಲು ಬಾಯಿ ರೋಗ ನಿಯಂತ್ರಣದ 8ನೇ ಸುತ್ತಿನ ಬೃಹತ್ ಲಸಿಕಾ ಅಭಿಯಾನ
ಧಾರವಾಡ (ಅ. 31): ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನದ (Foot and Mouth Disease – FMD) 8ನೇ ಸುತ್ತಿನ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ. ನವೆಂಬರ್ 03, 2025 ರಿಂದ ಡಿಸೆಂಬರ್ 02, 2025ರವರೆಗೆ ಜಿಲ್ಲೆಯಾದ್ಯಂತ ಈ ಬೃಹತ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಶುಕ್ರವಾರದಂದು (ಅ. 31) ನಡೆದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ಕುರಿತು ಮಾಹಿತಿ ನೀಡಿ, ಅಭಿಯಾನವನ್ನು ಯಶಸ್ವಿಗೊಳಿಸಲು…

