ಪಶುಪತಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸುಧಾ ಡೊಳ್ಳಿನ ಅವಿರೋಧ ಆಯ್ಕೆ
ಕುಂದಗೋಳ: ತಾಲ್ಲೂಕಿನ ಪಶುಪತಿಹಾಳ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಸುಧಾ ವಿ. ಡೊಳ್ಳಿನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 9 ಸದಸ್ಯ ಬಲ ಹೊಂದಿರುವ ಈ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸುಧಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬೇರೆ ಯಾರೂ ಸ್ಪರ್ಧಿಸದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಐ.ಎ.ಎಸ್ ಪ್ರೊಬೇಷನರಿ ಅಧಿಕಾರಿ ಹಾಗೂ ತಾ ಪಂ ಇಒ ಆದ ಕುಮಾರಿ ರೀತಿಕಾ ವರ್ಮಾ ಅಧಿಕೃತವಾಗಿ…

