ಕಲಘಟಗಿ ಅಪಾಯಕಾರಿ ಮರಗಳ ತೆರವಿಗೆ ಫೆಬ್ರವರಿ 27 ಮತ್ತು ಮಾರ್ಚ್ 11 ರಂದು ಬಹಿರಂಗ ಹರಾಜು

Spread the love

ಧಾರವಾಡ: ಕಲಘಟಗಿ ವಲಯದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯು ಫೆಬ್ರವರಿ 27 ಮತ್ತು ಮಾರ್ಚ್ 11, 2026 ರಂದು ಬಹಿರಂಗ ಹರಾಜು ಹಮ್ಮಿಕೊಂಡಿದೆ. ಕಲಘಟಗಿ-ಧಾರವಾಡ ಮುಖ್ಯರಸ್ತೆಯ ಹಿರೇಹೊನ್ನಳ್ಳಿ ಗ್ರಾಮದ ದೂಳಿಕೊಪ್ಪ ಕ್ರಾಸ್ ಹತ್ತಿರ ಇರುವ 3 ಅಪಾಯಕಾರಿ ಮರಗಳು ಹಾಗೂ ಗಂಜಿಗಟ್ಟಿ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದ ಆವರಣದಲ್ಲಿ ನೂತನ ವಸತಿ ನಿಲಯ ನಿರ್ಮಾಣಕ್ಕೆ ಅಡಚಣೆಯಾಗಿರುವ 26 ವಿವಿಧ ಜಾತಿಯ ಮರಗಳು ಸೇರಿದಂತೆ ಒಟ್ಟು 29 ಮರಗಳು ಹಾಗೂ 23 ಎಳೆಗಳನ್ನು ಅಂದು ಮಧ್ಯಾಹ್ನ 3 ಗಂಟೆಗೆ ಕಲಘಟಗಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಹರಾಜು ಮಾಡಲಾಗುವುದು.

​ಮರ ಸಂರಕ್ಷಣಾ ಕಾಯ್ದೆ 1976 ರ ಅನ್ವಯ ಈ ಮರಗಳ ತೆರವಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಏನಾದರೂ ತಕರಾರುಗಳನ್ನು ಹೊಂದಿದ್ದಲ್ಲಿ, ಅವುಗಳನ್ನು ಲಿಖಿತ ರೂಪದಲ್ಲಿ ಫೆಬ್ರವರಿ 26, 2026 ರ ಒಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತರು ತಮ್ಮ ಆಕ್ಷೇಪಣೆಗಳನ್ನು ಧಾರವಾಡ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಥವಾ ಧಾರವಾಡದ ಕೆ.ಸಿ. ಪಾರ್ಕ್ ಎದುರಿಗಿರುವ ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *