ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ: ತಾಲೂಕುವಾರು ವೇಳಾಪಟ್ಟಿ ಪ್ರಕಟ

Spread the love

ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿಗೆ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು, ಫೆಬ್ರವರಿ 05, 2026 ರಂದು ಕಿರಿಯರ ವಿಭಾಗಕ್ಕೆ ಹಾಗೂ ಫೆಬ್ರವರಿ 06, 2026 ರಂದು ಹಿರಿಯರ ವಿಭಾಗಕ್ಕೆ ಆಯ್ಕೆ ನಡೆಯಲಿದೆ. ಇದಕ್ಕೂ ಮುನ್ನ ತಾಲೂಕು ಮತ್ತು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸಲು ಇಲಾಖೆಯ ತರಬೇತುದಾರರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

​ತಾಲೂಕುವಾರು ಆಯ್ಕೆ ಪ್ರಕ್ರಿಯೆಯು ಜನವರಿ 16 ರಿಂದ ಆರಂಭವಾಗಲಿದ್ದು, ಅಂದು ಏಕಕಾಲಕ್ಕೆ ಮೂರು ಕಡೆಗಳಲ್ಲಿ ಆಯ್ಕೆ ನಡೆಯಲಿದೆ. ಕಲಘಟಗಿ ತಾಲೂಕಿಗೆ ಗಳಗಿಹುಲಕೊಪ್ಪದ ಶ್ರೀಮತಿ ಶಿವರಾಜದೇವಿ ಪಿಯು ಕಾಲೇಜಿನಲ್ಲಿ (ಸಂಪರ್ಕ: ಶ್ಯಾಮಲಾ ಪಾಟೀಲ- 9845868491), ಅಣ್ಣಿಗೇರಿ ತಾಲೂಕಿಗೆ ಪಟ್ಟಣದ ಸರ್ಕಾರಿ ಶಾಲೆ ನಂ.1ರಲ್ಲಿ (ಸಂಪರ್ಕ: ಚಂದ್ರಶೇಖರ ನಾಯ್ಕರ- 9538462597) ಹಾಗೂ ನವಲಗುಂದ ತಾಲೂಕಿಗೆ ಮೊರಬದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ (ಸಂಪರ್ಕ: ಶಿವಪ್ಪ ಪಾಟೀಲ್- 9535314382) ಬೆಳಿಗ್ಗೆ 9 ಗಂಟೆಗೆ ಪ್ರಕ್ರಿಯೆ ಜರುಗಲಿದೆ.

​ಜನವರಿ 17 ರಂದು ಧಾರವಾಡ ತಾಲೂಕಿಗೆ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ, ಹುಬ್ಬಳ್ಳಿ ತಾಲೂಕಿಗೆ ಸೆಟ್ಲಮೆಂಟ್ ಹಾಕಿ ಮೈದಾನದಲ್ಲಿ ಹಾಗೂ ಕುಂದಗೋಳ ತಾಲೂಕಿಗೆ ಆರ್‌ಎಂಎಸ್‌ಎ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಳ್ನಾವರ ತಾಲೂಕಿನ ಕ್ರೀಡಾಪಟುಗಳಿಗೆ ಜನವರಿ 20 ರಂದು ಅಳ್ನಾವರ ತಾಲೂಕು ಮೈದಾನದಲ್ಲಿ ಆಯ್ಕೆ ನಡೆಯಲಿದ್ದು, ಅನುಶ್ರೀ ಎಚ್.ಎಸ್ (7022315684) ಅವರು ಸಂಚಾಲಕರಾಗಿರುತ್ತಾರೆ. ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿ ದೂರವಾಣಿ ಸಂಖ್ಯೆ 0836-2447424 ಅನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *