ರೌಡಿಶೀಟರ್‌ಗಳ ಜೊತೆ ಪಿಎಸ್‌ಐ ಬರ್ತಡೇ ಆಚರಣೆ: ವಿಶ್ವಾಸಾರ್ಹತೆ ಕುರಿತು ತೀವ್ರ ಚರ್ಚೆ

Spread the love

ಧಾರವಾಡ: ನಗರದ ಉಪನಗರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ರುದ್ರಪ್ಪ ಗುಡದರಿ ಅವರು ರೌಡಿಶೀಟರ್‌ಗಳು ಮತ್ತು ಎನ್‌ಡಿಪಿಎಸ್ (ಮಾದಕ ವಸ್ತುಗಳ ಕಾಯಿದೆ) ಪ್ರಕರಣಗಳ ಆರೋಪಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

​ಕೃಷಿ ವಿಶ್ವವಿದ್ಯಾಲಯದ ಸಮೀಪವಿರುವ ಒಂದು ಖಾಸಗಿ ಹೋಟೆಲ್‌ನಲ್ಲಿ ಈ ಜನ್ಮದಿನದ ಆಚರಣೆ ನಡೆದಿದೆ ಎಂದು ವರದಿಯಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಅಧಿಕಾರಿಯೇ ಸಮಾಜಘಾತುಕ ಶಕ್ತಿಗಳ ಜೊತೆಗೂಡಿ ಈ ರೀತಿ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಅಪರಾಧಿಗಳೊಂದಿಗಿನ ಅಧಿಕಾರಿಗಳ ನಿಕಟ ಸಂಪರ್ಕವು ಇಲಾಖೆಯ ಕರ್ತವ್ಯ ನಿಷ್ಠೆ ಕುರಿತು ಆಳವಾದ ಚರ್ಚೆಗೆ ನಾಂದಿ ಹಾಡಿದೆ.

​ವೈರಲ್ ಆಗಿರುವ ಫೋಟೊಗಳಲ್ಲಿ ಪಿಎಸ್‌ಐ ರುದ್ರಪ್ಪ ಗುಡದರಿ ಅವರೊಂದಿಗೆ ರೌಡಿಶೀಟರ್‌ಗಳು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಆರೋಪಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಗಂಭೀರ ಘಟನೆಯ ಬಗ್ಗೆ ಮುಂದೆ ಎನಾಗುತ್ತದೆ ಸಾರ್ವಜನಿಕರೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *