

ಫೋಟೋ: ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ನೀಲವ್ವ ಲ. ಹೊಸಳ್ಳಿ ನೇರವೇರಿಸಿ ನಂತರ ಉಪಾಧ್ಯಕ್ಷರಾದ ತಾಯವ್ವ ಕೆಂಚಣ್ಣವರ ಮತ್ತ ಸರ್ವ ಸದಸ್ಯರು ಗ್ರಾ ಪಂ ಪಿಡಿಒ ಸೇರಿ ಅಂಗವಿಕಲರಿಗೆ ಕುಕ್ಕರ ವಿತರಣೆ ಮಾಡಿದರು.
ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮಳೆಹನಿಗಳ ನಡುವೆಯೂ ಗ್ರಾಮಸ್ಥರು ದೇಶಭಕ್ತಿಯನ್ನು ಮೆರೆದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಲ. ಹೊಸಳ್ಳಿ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರನಾಯಕರಿಗೆ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, "ನೂರಾರು ಮಹನೀಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ," ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಇತರ ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಇದೇ ಸಮಯದಲ್ಲಿ ಗುಡೇನಕಟ್ಟಿ ಗ್ರಾ ಪಂ ವ್ಯಾಪ್ತಿಗೆ ಓಳಪಡುವ ಗ್ರಾಮದ ಅಂಗವಿಕಲರಿಗೆ ಕುಕ್ಕರ್ ವಿತರಣೆ ಮಾಡಲಾಯಿತು. “
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ತಾಯವ್ವ ಕೆಂಚನ್ನವರ, ಸದಸ್ಯರಾದ ಚಿದಾನಂದ ಕುಸುಗಲ, ಸಕ್ರಪ್ಪ ಕಮ್ಮಾರ, ಮಾಲತೇಶ ಕೆಂಚನ್ನವರ, ವಿಶಾಲಾ ಯೋಗಪ್ಪನವರ,,ಶಂಕ್ರವ್ವ ಹೊಸಳ್ಳಿ,ಗುರುಪಾದಪ್ಪ ಹೊಸಳ್ಳಿ, ಬಸವರಾಜ್ ಯೋಗಪ್ಪನವರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು.

