

ಕುಂದಗೋಳ:”ಸುಮಾರು 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಲು ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ
ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಅಸಂಖ್ಯಾತ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ನಾವು ಸದಾ ಸ್ಮರಿಸಬೇಕು. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರರಾಗಿ ಮಾತನಾಡಲು ಸಾಧ್ಯವಾಗಿದೆ. ಈ ದಿನವನ್ನು ಆಚರಿಸುವುದರ ಪ್ರಮುಖ ಉದ್ದೇಶವೇ ನಮ್ಮ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಮತ್ತು ನಮ್ಮ ಹಿರಿಯರ ತ್ಯಾಗದ ಬಗ್ಗೆ ಅರಿವು ಮೂಡಿಸುವುದಾಗಿದೆ,” ಎಂದು ಶಾಸಕ ಎಮ್ ಆರ್ ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಗೆ ಶುಭಾಶಯ ಕೋರಿ ಮಾತನಾಡಿದ ಅವರು ”ಸ್ವಾತಂತ್ರ್ಯಾನಂತರ ಭಾರತವು ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಪ್ರಗತಿ ಸಾಧಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ. ಬಲಿಷ್ಠ ರಾಷ್ಟ್ರಗಳೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ, ಭಾರತವು ಸ್ಥಿರವಾಗಿ ಮುನ್ನಡೆಯುತ್ತಿರುವುದು ನಮ್ಮ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ನಾವೆಲ್ಲರೂ ಜಾತಿ, ಮತ, ಪಂಥಗಳನ್ನು ಮೀರಿ ಒಗ್ಗಟ್ಟಿನಿಂದ ದೇಶದ ಪ್ರಗತಿಗಾಗಿ ಶ್ರಮಿಸಬೇಕು ಮತ್ತು ನಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು,” ಎಂದು ಕರೆ ನೀಡಿದರು.
ಧ್ವಜ ಸಂದೇಶ ಕುರಿತು ಮಾತನಾಡಿದ ತಹಶಿಲ್ದಾರ ರಾಜು ಮಾವರಕರ “ಸ್ವಾತಂತ್ರ್ಯ ಹೋರಾಟವು ಕೇವಲ ಪರಕೀಯ ಆಳ್ವಿಕೆಯಿಂದ ಬಿಡುಗಡೆಯಾಗಿರಲಿಲ್ಲ, ಅದು ನಮ್ಮ ಗುರುತು, ಘನತೆ ಮತ್ತು ಸಮಾನ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿತ್ತು. ಆ ಮಹನೀಯರ ತ್ಯಾಗವನ್ನು ಸ್ಮರಿಸುತ್ತಾ, ಸಂವಿಧಾನದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ,” ಎಂದು ಹೇಳಿದರು.
”ಈ ಆದರ್ಶಗಳ ಆಧಾರದ ಮೇಲೆ, ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. “ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ 21,400 ರೈತರಿಗೆ ₹12.5 ಕೋಟಿ ಪರಿಹಾರ ನೀಡಲಾಗಿದೆ. ಭೂಮಿ ದಾಖಲೆಗಳ ಡಿಜಿಟಲೀಕರಣ, ಮ್ಯುಟೇಶನ್ ಪ್ರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದು, 16 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಶಾಸಕರು ಮತ್ತು ಸಾರ್ವಜನಿಕರ ಸಹಕಾರದಿಂದ ಕುಂದಗೋಳವನ್ನು ರಾಜ್ಯಕ್ಕೆ ಮಾದರಿ ತಾಲೂಕನ್ನಾಗಿ ಮಾಡುವ ಗುರಿ ಹೊಂದಿದ್ದೇವೆ,” ಎಂದು ತಮ್ಮ ಆಡಳಿತದ ಪ್ರಗತಿಯನ್ನು ವಿವರಿಸಿದರು.
ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು. ಪೌರಕಾರ್ಮಿಕರಿಗೆ, ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ಅಂಗವಿಕಲರಿಗೆ ಚೇರ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಶ್ಯಾಮಸಂದ್ರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ್ ಹಿರೇಮಠ,ತಾಲೂಕು ಪಂಚಾಯಿತಿ ಇ ಓ ಜಗದೀಶ್ ಕಮ್ಮಾರ್, ಶಿವಾನಂದ್ ಬೆಂತೂರ, ಡಾ,ಅರವಿಂದ ಕಟಗಿ, ಬಸವರಾಜ್ ಶಿರಸಂಗಿ, ಮಾಣಿಕ್ಯ ಚೆಲ್ಲೂರು, ಕಲ್ಲಪ್ಪ ಹರಿಕುಣಿ, ಬಸವರಾಜ ಹರವಿ, ಸಿಪಿಐ ಶಿವಾನಂದ್ ಅಂಬಿಗೇರ, ಬಸವರಾಜ ಯೋಗಪ್ಪನವರ,ಹಾಗೂ ಇತರರು ಇದ್ದರು.
ಫೋಟೋ: 01 ಎ ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಶಾಸಕ ಎಂಆರ್ ಪಾಟೀಲ್ ಮಾತನಾಡಿದರು,
ಫೋಟೋ :2 ಕುಂದಗೋಳ:ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಅರವಿಂದ ಎಮ್ ಕಟಗಿ, ಗೌತಮ್ ಭಾಫನ, ಅಭಯ ಪಾರ್ಲೆಜಾ, ಕಿರಣ ಅರಮನೆ, ಕವಿತಾ ಕೆ ಎಮ್, ಬಸನಗೌಡ ಶೀಲವಂತರ ಅವರಿಗೆ ಶಾಸಕ ಎಂ ಆರ್ ಪಾಟೀಲ್ ಅವರು ಸನ್ಮಾನಿಸಿದರು. ತಹಸಿಲ್ದಾರ್ ರಾಜು ಮೋವರಕರ, ಶಿವಾನಂದ ಬೆಂತೂರ, ಜಗದೀಶ್ ಕಮ್ಮಾರ, ಬಿ ಟಿ ಗಂಗಾಯಿ, ಪೃಥ್ವಿರಾಜ್ ಕಾಳೆ,ಬಸವರಾಜ ಕೊಪ್ಪದ, ಮಾಣಿಕ್ಯ ಚೆಲ್ಲೂರು, ಈರಣ್ಣ ನಾಗಣ್ಣವರ, ಬಸವರಾಜ್ ಶಿರಸಂಗಿ ಇತರರು ಇದ್ದರು.

