
ನವಲಗುಂದ: ಪಟ್ಟಣದಲ್ಲಿರುವ ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಸದುಗೌಡ ಅಂದಾನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಸೋಮೇಶ ಜಗದೀಶ ಉಪನಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀದೇವಿ ಕುಲಕರ್ಣಿ ಘೋಷಿಸಿದರು.
ಅದೇ ರೀತಿ, ಸಂಘದ ನಿರ್ದೇಶಕ ಸ್ಥಾನಗಳಿಗೆ ಶಿದ್ದಲಿಂಗಪ್ಪ ಚನಬಸಪ್ಪ ಮದ್ಯೋರ, ಪಕ್ಕೀರಗೌಡ ರುದ್ರಗೌಡ ಕಲ್ಲನಗೌಡ್ರ, ಮಂಜುನಾಥ ಹನಮಪ್ಪ ಬಂಡಿವಾಡ, ನಾಗನಗೌಡ ಶಿದ್ಧನಗೌಡ ಪಾಟೀಲ, ಶ್ರೀಶೈಲಪ್ಪ ಶಿವರಾಮಪ್ಪ ನಿಡವಣಿ, ದೇವಪ್ಪ ಮಲ್ಲಪ್ಪ ಸೂರಿನ, ಬಸವರಾಜ ಮುದಕಪ್ಪ ನರಗುಂದ, ಅಣ್ಣಪ್ಪ ಶಂಕ್ರಪ್ಪ ಬಾಗಿ, ಶಿವಪ್ಪ ಮಲ್ಲಪ್ಪ ಹಿರೇಣ್ಣವರ, ನಾಗಲಿಂಗಪ್ಪ ಭರಮಪ್ಪ ದೊಡಮನಿ, ಗೋವಿಂದಪ್ಪ ಭೀಮಪ್ಪ ತಳವಾರ, ಸುಧೀಂದ್ರ ರಾಮಪ್ಪ ಬೆಟಗೇರ, ರುದ್ರಪ್ಪ ಬಸಪ್ಪ ಮಣಕವಾಡ, ಅನ್ನಪೂರ್ಣ ಜಗದೀಶ ಉಪನಾಳ ಮತ್ತು ಬಸವ್ವ ಮಾದೇವಪ್ಪ ಕುಡವಕ್ಕಲಿಗೇರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ, ನೂತನ ಅಧ್ಯಕ್ಷ ಸದಾಶಿವಗೌಡ ಪಾಟೀಲ್ ಮತ್ತು ಉಪಾಧ್ಯಕ್ಷ ಸೋಮೇಶ ಉಪನಾಳ ಅವರನ್ನು ಹಿರಿಯರಾದ ರಾಯನಗೌಡ ಪಾಟೀಲ್, ಬಸವರಾಜ ಹರಿವಾಳ, ನಾಗಪ್ಪ ಸಂಗಟಿ ಸೇರಿದಂತೆ ಅನೇಕ ಗಣ್ಯರು ಸನ್ಮಾನಿಸಿ, ಸಂಘದ ಮುಂದಿನ ಕಾರ್ಯಗಳಿಗೆ ಶುಭ ಕೋರಿದರು.

