ಧಾರವಾಡ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನವೆಂಬರ್ 08 ರಂದು ಶ್ರೀ ಕನಕದಾಸರ ಜಯಂತಿ ಮತ್ತು ನವೆಂಬರ್ 11 ರಂದು ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಜಯಂತಿಗಳ ಅಚ್ಚುಕಟ್ಟಾದ ಆಚರಣೆ ಕುರಿತು ಚರ್ಚಿಸಲು ಮತ್ತು ಯೋಜಿಸಲು ಈ ಪೂರ್ವಭಾವಿ ಸಭೆಯನ್ನು ಅಕ್ಟೋಬರ್ 30 ರಂದು (ನಾಳೆ) ಸಂಜೆ ೪ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಸದರಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಭಾಗವಹಿಸಿ, ಜಯಂತಿಗಳನ್ನು ಯಶಸ್ವಿಯಾಗಿ ಆಚರಿಸಲು ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.

