ವೀರರಾಣಿ ಚೆನ್ನಮ್ಮ ಚರಿತ್ರೆ ಓದಿ ಯುವಕರು ದೇಶಾಭಿಮಾನ ಹೆಚ್ಚಿಸಿಕೊಳ್ಳಿ: ತಹಶೀಲ್ದಾರ ಸುಧೀರ ಸಾಹುಕಾರ

Spread the love

ನವಲಗುಂದ: ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರಂತಹ ಮಹನೀಯರ ಚರಿತ್ರೆಗಳನ್ನು ಇಂದಿನ ಯುವಕರು ಆಳವಾಗಿ ಅಧ್ಯಯನ ಮಾಡಿ, ಅದರ ಮೂಲಕ ದೇಶದ ಮೇಲಿನ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಹಶೀಲ್ದಾರ ಸುಧೀರ ಸಾಹುಕಾರ ಹೇಳಿದರು.

ಅವರು ಗುರುವಾರ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮನವರ 248ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಬ್ರಿಟಿಷರ ವಿರುದ್ಧದ ಕೆಚ್ಚೆದೆಯ ಹೋರಾಟ ಸ್ಮರಣೆ

ವೀರರಾಣಿ ಚೆನ್ನಮ್ಮ ಅವರ ಹೋರಾಟದ ಮಹತ್ವವನ್ನು ಸ್ಮರಿಸಿದ ತಹಶೀಲ್ದಾರರು, ಚೆನ್ನಮ್ಮನವರ ಜೀವನವು ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವಂತಿದೆ. ಮಹಿಳೆಯರು ಸಹ ಆಡಳಿತ ಮತ್ತು ಹೋರಾಟದಲ್ಲಿ ಸರಿಸಮರಾಗಿದ್ದರು ಎಂಬುದಕ್ಕೆ ರಾಣಿ ಚೆನ್ನಮ್ಮರೇ ಸಾಕ್ಷಿ ಎಂದರು.

ಪಂಚಮಸಾಲಿ ಸಮಾಜದ ತಾಲ್ಲೂಕಾ ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ ಮಾತನಾಡಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಚೆನ್ನಮ್ಮ ಅವರು ವೀರರಾಣಿ ಎನಿಸಿಕೊಂಡಿದ್ದರು. ಅವರ ಬಲಿದಾನವನ್ನು ಎಂದಿಗೂ ಮರೆಯುವಂತಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಇ.ಓ. ಭಾಗ್ಯಶ್ರೀ ಜಹಿಗೀರದಾರ, ಡಾ. ಮನೋಹರ ದ್ಯಾಬೇರಿ ಸೇರಿದಂತೆ ಹಲವು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಮುಖಂಡರಾದ ಸದುಗೌಡ ಪಾಟೀಲ, ದ್ಯಾಮನಗೌಡ ಪಾಟೀಲ್, ಮಹೇಶ ಕುರ್ತಕೋಟಿ, ಮಡಿವಾಳಪ್ಪ ಶಿರಿಯಣ್ಣವರ, ಡಿ.ಎಂ. ನೀಡವಣಿ, ಆರ್.ಬಿ. ಕಮತರ, ಸಿದ್ದಪ್ಪ ಜನ್ನರ, ಮಲ್ಲಿಕಾರ್ಜುನ ಸಂಗನಗೌಡ್ರ, ಮಲ್ಲಪ್ಪ ಕಿರೆಸೂರ್, ವೈ.ಬಿ. ಕುರಹಟ್ಟಿ, ಶ್ರೀಶೈಪ್ಪ ನಿಡವಣಿ, ಗಣೇಶ ಹೊಳೆಯನ್ನವರ, ಶ್ರೀನಿವಾಸ್ ಅಮತ್ಯಾನವರ ಸೇರಿದಂತೆ ಸಮಾಜದ ಬಾಂಧವರು ಹಾಗೂ ಗಣ್ಯರು ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *