
ಧಾರವಾಡ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಜಿಲ್ಲಾ ಪೊಲೀಸರು, ಇತ್ತೀಚೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 27 ಇಸ್ಪೀಟ್/ಜೂಜಾಟ ಪ್ರಕರಣಗಳನ್ನು ಪತ್ತೆ ಹಚ್ಚಿ, 45 ಮಂದಿ ಆರೋಪಿತರನ್ನು ಬಂಧಿಸಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಸದಾ ಸನ್ನದ್ಧವಾಗಿದ್ದು, ಅಪರಾಧ ನಿಯಂತ್ರಣಕ್ಕಾಗಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಅಧೀಕ್ಷಕರು ಶ್ರೀ ಗುಂಜನ್ ಆರ್ಯ (ಐ.ಪಿ.ಎಸ್.) ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು ಸೂಕ್ತ ಮಾಹಿತಿಯನ್ನು ಸಂಗ್ರಹಿಸಿದ ಧಾರವಾಡ ಜಿಲ್ಲಾ ಪೊಲೀಸರು, ಅ 21 ರಂದು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.
ಠಾಣಾವಾರು ದಾಖಲಾದ ಪ್ರಕರಣಗಳ ವಿವರ ಹೀಗಿದೆ:
ಒಟ್ಟು 27 ಜೂಜಾಟ ಪ್ರಕರಣಗಳು ಈ ಕೆಳಕಂಡಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿವೆ:
ಧಾರವಾಡ ಗ್ರಾಮೀಣ ಠಾಣೆ: 06
ಹುಬ್ಬಳ್ಳಿ ಗ್ರಾಮೀಣ ಠಾಣೆ: 03
ನವಲಗುಂದ ಠಾಣೆ: 02
ಅಳ್ಳಾವರ ಠಾಣೆ: 01
ಗರಗ ಠಾಣೆ: 05
ಅಣ್ಣಿಗೇರಿ ಠಾಣೆ: 04
ಗುಡಗೇರಿ ಠಾಣೆ: 03
ಕಲಘಟಗಿ ಠಾಣೆ: 01
ಕುಂದಗೋಳ ಠಾಣೆ: 02
ಒಟ್ಟಾರೆಯಾಗಿ 27 ಇಸ್ಪೀಟ್ ಜೂಜಾಟ ಪ್ರಕರಣಗಳನ್ನು ದಾಖಲಿಸಿ, ಒಟ್ಟು 45 ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
ಇದೇ ವೇಳೆ, ಜಿಲ್ಲಾ ಪೊಲೀಸ್ ವತಿಯಿಂದ, ಇಸ್ಪೀಟ್ ಆಡುವುದು ಕಾನೂನು ಬಾಹಿರವಾಗಿದ್ದು, ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಪರಾಧ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಇನ್ನಷ್ಟು ಬಿಗಿಯಾಗಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ತಿಳಿಸಿದ್ದಾರೆ.

