ಸಚಿವ ಸಂತೋಷ ಲಾಡ್ ಅವರಿಂದ ಮಾನವೀಯ ಸ್ಪಂದನೆ: ಮೃತ ವಿದ್ಯಾರ್ಥಿ ಕುಟುಂಬಕ್ಕೆ ₹೧ ಲಕ್ಷ ನೆರವು

Spread the love

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬಾವಿಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಕಾಲೇಜು ವಿದ್ಯಾರ್ಥಿ ನಾಗರಾಜ ಬಸಪ್ಪ ಬಾರಕೇರ ಅವರ ದುಃಖಿತ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸಂತೋಷ ಲಾಡ್ ಅವರು ತಮ್ಮ ‘ಸಂತೋಷ ಲಾಡ್ ಫೌಂಡೇಶನ್’ ವತಿಯಿಂದ ಒಂದು ಲಕ್ಷ ರೂಪಾಯಿ (₹1,00,000) ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಾಲ್ಕು ದಿನಗಳ ಹಿಂದೆ ಸಂಭವಿಸಿದ್ದ ಈ ದುಃಖಕರ ಘಟನೆಯು ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಯನ್ನು ನೋಡಿದ ಕೂಡಲೇ ಸಚಿವರಾದ ಸಂತೋಷ ಲಾಡ್ ಅವರು ತಕ್ಷಣ ತಮ್ಮ ಆಪ್ತ ಸಹಾಯಕ ಶ್ರೀ ಸೋಮಶೇಖರ್ ಬೆನ್ನೂರ ಅವರಿಗೆ ಕರೆ ಮಾಡಿ, ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ತಲುಪಿಸಲು ಸೂಚಿಸಿದರು.

ಅದರಂತೆ, ಸಚಿವರ ಆಪ್ತ ಕಾರ್ಯದರ್ಶಿ ಶ್ರೀ ಸೋಮಶೇಖರ್ ಬೆನ್ನೂರ ಅವರು ಸೋಮವಾರದಂದು ಧಾರವಾಡ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀ ಎಸ್.ಆರ್. ಪಾಟೀಲ ಅವರೊಂದಿಗೆ ಮಿಶ್ರಿಕೋಟಿ ಗ್ರಾಮಕ್ಕೆ ಭೇಟಿ ನೀಡಿದರು. ಅವರು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ದುಃಖದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ₹೧ ಲಕ್ಷ ರೂಪಾಯಿ ಮೊತ್ತದ ಆರ್ಥಿಕ ನೆರವಿನ ಚೆಕ್‌ನ್ನು ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷರಾದ ಶ್ರೀ ನರೇಶ್ ಮಲೆನಾಡು, ಪಕ್ಷದ ಮುಖಂಡರಾದ ಶ್ರೀ ಗುರು ಕಂಪ್ಲಿ, ಬಸವರಾಜ ದಾಸನಕೊಪ್ಪ, ವೆಂಕಟೇಶ ಬಂಡಿವಡ್ಡರ, ಸಹದೇವ ಉಳ್ಳಾಗಡ್ಡಿ, ಪುಟ್ಟು ಪಿರೋಜಿ, ನಿಂಗಪ್ಪ ಮಾದಮ್ಮನವರ, ರಾಘು ಚಿಕ್ಕಾಡಿ, ಯಲ್ಲಪ್ಪ ಕುಂದಗೋಳ, ಯಲ್ಲಪ್ಪ ಬೋಸಲೆ, ಶಿವು ಕನಕಪ್ಪನವರ, ಅಬ್ದುಲ್ ಜಬ್ಬರಖಾನ ಮೆಣಸಿನಕಾಯಿ, ಮಾಬೂಬಲಿ ಕುಸುಗಲ್, ನಾರಾಯಣ ಸವಣೂರು, ಗೋಪಾಲ ಜಾದವ, ಮಾಬೂಲಿ ಕೊಪ್ಪದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಹಿರಿಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು, ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

Leave a Reply

Your email address will not be published. Required fields are marked *