ಶ್ರೀ ಸಿದ್ಧಾರೂಢ ಸೇವಾ ಟ್ರಸ್ಟ್ ಉಪಸಮಿತಿಗಳ ರಚನೆ ನೂತನ ಮಠ ಕಟ್ಟಡ ನಿರ್ಮಾಣಕ್ಕೆ ಭಕ್ತರ ಸೇವಾ ಹಸ್ತ ಅಗತ್ಯ: ವಿದ್ಯಾನಂದಸ್ವಾಮಿಗಳ ನೇತೃತ್ವದಲ್ಲಿ ಸಭೆ

Spread the love

ಧಾರವಾಡ :ತಾಲೂಕು ಕಣವಿ ಹೊನ್ನಾಪೂರ ಗ್ರಾಮದ ಶ್ರೀ ಸಿದ್ಧಾರೂಢ ಸೇವಾ ಟ್ರಸ್ಟ್‌ನ ಉಪಸಮಿತಿಗಳನ್ನು ರಚಿಸುವ ಸಭೆಯನ್ನು ಕಲಘಟಗಿ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಭಾನುವಾರ (ಅ.12)ರಂದು ಆಯೋಜಿಸಲಾಯಿತು.

ಈ ಸಭೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವಿದ್ಯಾನಂದಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಗಿದ್ದು, ಟ್ರಸ್ಟ್‌ನ ಕಾರ್ಯವೈಖರಿಯನ್ನು ಬಲಪಡಿಸುವ ಉದ್ದೇಶದಿಂದ ಐದು ಉಪಸಮಿತಿಗಳನ್ನು ರಚಿಸಲಾಯಿತು.

ಐದು ಉಪಸಮಿತಿಗಳ ರಚನೆ
ಸಭೆಯಲ್ಲಿ ಶ್ರೀ ಸಿದ್ಧಾರೂಢ ಸೇವಾಶ್ರಮ ನಿರ್ಮಾಣ ಸಮಿತಿ, ಯೋಜನಾ ಸಮಿತಿ, ಸಲಹಾ ಸಮಿತಿ, ಪ್ರಚಾರ ಸಮಿತಿ ಮತ್ತು ಶ್ರೀ ಸಿದ್ಧಾರೂಢಸ್ವಾಮಿ ಜಯಂತ್ಯುತ್ಸವ ಸಮಿತಿ ಎಂಬ ಐದು ಉಪಸಮಿತಿಗಳು ರಚನೆಯಾಗಿದ್ದು, ಪ್ರತಿ ಸಮಿತಿಗೆ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಮತ್ತು ಸದಸ್ಯರು ಎಂದು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಪದಾಧಿಕಾರಿಗಳು
ಸಭೆಯಲ್ಲಿ ಸೋಮಲಿಂಗ ಒಡೆಯರ, ಹಣಮಂತ ಸುನಗದ, ದಾನೇಶ ಬುರಡಿ, ರವಿ ಬಡಿಗೇರ, ನಿಂಗಯ್ಯ ಸುರಗಿಮಠ, ಪರಶುರಾಮ ಹುಲಿಹೋಂಡ, ಸಾತಪ್ಪ ಕುಂಕುರ, ಪ್ರಭುಲಿಂಗಪ್ಪ ರಂಗಾಪುರ, ಮಂಜುನಾಥ ಮುಳಗುಂದ, ಗುರುರಾಜ ನರಸಾಪುರ, ಬಸಯ್ಯ ಸಂಗೇದೇವರಕೊಪ್ಪ, ಶಶಿಧರ ಸಾವಕಾರ, ದೊಡ್ಡೇಶ ಹಂಗರಕಿ, ಬಸಯ್ಯ ಹೆಬ್ಬಳ್ಳಿಮಠ, ಡಾ. ಜಯಾನಂದ ಹಟ್ಟಿ, ಬಸಪ್ಪ ಇಂಚಲ, ಚನ್ನಬಸಯ್ಯ ಹಿರೇಮಠ, ಕುಂಟೋಜಿ ಬಸವನಗೌಡ, ಮಂಜುನಾಥ ಕೆಲಗೇರಿ, ಕರಬಸಯ್ಯ ತೋಟಯ್ಯನವರ, ಗುರುಪಾದ ಮಡಿವಾಳರ, ಗುರುರಾಜ ಸಬನಿಸ್, ಉಮೇಶ ಹಡಪದ, ನಿಂಗಪ್ಪ ಪೂಜಾರ, ವಿರುಪಾಕ್ಷಪ್ಪ ಹೆಂಡಿ, ದ್ರಾಕ್ಷಾಯಿಣಿ ಬೆನಕಣ್ಣನವರ, ಲಕ್ಷ್ಮಿ ಕುಸಗಲ್, ಯಕ್ಕೆರಪ್ಪ ನಡುವಿನಮನಿ, ಮಾರುತಿ ಬೆನಕಣ್ಣವರ, ಭೀಮಸಿ ಅಕ್ಕಿ, ಮಂಜುನಾಥ ಇಳಿಗೆರ, ದೇಮಾನಿ ಅಂಬಗಾಂವಕಾರ, ಕುಮಾರಸ್ವಾಮಿ ಹಿರೇಮಠ ಮತ್ತು ರಾಮು ಗೊಟಗೋಡಿ ಅವರನ್ನು ಉಪಸಮಿತಿಗಳ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದೆ.

ಶ್ರೀ ಮಠ ನಿರ್ಮಾಣಕ್ಕೆ ಭೂದಾನ
ಈ ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ಗುರುಭಕ್ತ ಬಸಯ್ಯ ಸಂಗಯ್ಯ ಸಂಗೇದೇವರಕೊಪ್ಪ ಕುಟುಂಬದವರು, ತಮ್ಮ ಜಮೀನಿನ 5 ಗುಂಟೆ ಪ್ರದೇಶವನ್ನು ದಾನವಾಗಿ ನೀಡಿದ್ದು, ಅಲ್ಲಿಯೇ ಶ್ರೀ ಸಿದ್ಧಾರೂಢ ಸೇವಾಶ್ರಮ (ಮಠ) ನೂತನ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಸೇವೆಯ ಹಾದಿಯತ್ತ ಉಪಸಮಿತಿಗಳ ಜವಾಬ್ದಾರಿ
ನೂತನ ಮಠ ಕಟ್ಟಡ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಉಪಸಮಿತಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಟ್ರಸ್ಟ್ ಸಂಚಾಲಕರಾದ ಮಂಜುನಾಥ ಮುಳಗುಂದ ಪ್ರಕಟಣೆಯಲ್ಲಿ, “ಭಗವದ್ಭಕ್ತರು ತನು, ಮನ, ಧನದಿಂದ ಸಹಕಾರ ನೀಡಿ ನೂತನ ಮಠದ ಕಟ್ಟಡ ನಿರ್ಮಾಣಕ್ಕೆ ಕಾಣಿಕೆ ನೀಡುವ ಮೂಲಕ ಸೇವೆ ಸಲ್ಲಿಸಬೇಕು” ಎಂದು ಕರೆ ನೀಡಿದರು.


Leave a Reply

Your email address will not be published. Required fields are marked *