
ದೇವರಗುಡ್ಡ, (ಸಮೃದ್ಧಿ): ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ದೇವರಗುಡ್ಡದಲ್ಲಿ ಶ್ರೀ ಮಾಲತೇಶ ಸ್ವಾಮಿಯ 2025ನೇ ವರ್ಷದ ಕಾರಣಿಕ (ದೈವವಾಣಿ) ನುಡಿಯಲಾಗಿದ್ದು, “ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾತಲೆ ಪರಾಕ್” ಎಂಬ ಕಾರ್ಣಿಕ ವಾಣಿ ನುಡಿಯಲಾಗುದ್ದು. ಇದರ ಅರ್ಥಾತ್ ರಾಜ್ಯದಾದ್ಯಂತ ಉತ್ತಮ ಮಳೆ-ಬೆಳೆ ಆಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಎಂಬ ಗೂಢಾರ್ಥವುಳ್ಳ ದೈವವಾಣಿಯನ್ನು ಪ್ರಕಟಿಸಲಾಗಿದೆ.
ಈ ವರ್ಷದ ದೈವವಾಣಿಯ ವಿಶ್ಲೇಷಣೆಯ ಪ್ರಕಾರ, ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ವಿಶೇಷವಾಗಿ ಹಿಂಗಾರು ಬೆಳೆಯು ಸಹ ಅತ್ಯಂತ ಸಮೃದ್ಧವಾಗಿ ಫಲ ನೀಡಲಿದೆ ಎಂದು ಕಾರಣಿಕ ನುಡಿಯು ಸೂಚಿಸಿದೆ. ಇದು ರೈತ ಸಮುದಾಯಕ್ಕೆ ಸಂತಸ ತಂದಿದೆ.
ರಾಜಕೀಯದಲ್ಲಿ ಬದಲಾವಣೆ ಇಲ್ಲ,
ಹೊಸ ನಾಯಕರ ಉದಯ
ದೈವವಾಣಿಯಲ್ಲಿ ರಾಜ್ಯದ ರಾಜಕೀಯ ಪರಿಸ್ಥಿತಿಯ ಕುರಿತೂ ಭವಿಷ್ಯ ನುಡಿಯಲಾಗಿದೆ. ಪ್ರಸ್ತುತ ರಾಜಕೀಯವಾಗಿ ಯಾವುದೇ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ರಾಜ್ಯದಲ್ಲಿ ಹೊರಹೊಮ್ಮಲಿದ್ದಾರೆ ಎಂದು ಕಾರಣಿಕದಲ್ಲಿ ಹೇಳಲಾಗಿದೆ.
09 ದಿನಗಳ ವ್ರತ, 18 ಅಡಿ ಬಿಲ್ಲನ್ನೇರಿ ಕಾರಣಿಕ ನುಡಿ
ಪ್ರಸ್ತುತ ವರ್ಷದ ದೈವವಾಣಿಯನ್ನು ನುಡಿದಿರುವ ನಾಗಪ್ಪ ಉರ್ಮಿ ಗೊರವಯ್ಯನವರು, ಸಾಂಪ್ರದಾಯಿಕ ವಿಧಿ-ವಿಧಾನಗಳಂತೆ ಒಂಬತ್ತು ದಿನಗಳ ಕಾಲ ಉಪವಾಸ ವ್ರತ ಆಚರಿಸಿದ ಬಳಿಕ, 18 ಅಡಿ ಎತ್ತರದ ಬಿಲ್ಲನ್ನೇರಿ ಈ ಕಾರಣಿಕವನ್ನು ನುಡಿದಿದ್ದಾರೆ. ಈ ಕಾರಣಿಕವನ್ನು (ದೈವವಾಣಿ) ದೇವರಗುಡ್ಡದಲ್ಲಿ ವರ್ಷದ ಭವಿಷ್ಯವಾಣಿ ಎಂದೇ ಅತ್ಯಂತ ಪವಿತ್ರವಾಗಿ ಹಾಗೂ ಪ್ರಸಿದ್ದಿಯಿಂದ ಸ್ವೀಕರಿಸಲಾಗುತ್ತದೆ. ಈ ವರ್ಷದ ದೈವವಾಣಿಯು ರಾಜ್ಯಕ್ಕೆ ಸಮೃದ್ಧಿಯ ಸಂಕೇತವಾಗಿದೆ ಎಂಬುದು ಭಕ್ತರ ಆಶಯವಾಗಿದೆ.

