ಗುಡಗೇರಿಯಲ್ಲಿ ಸಿಲಿಂಡರ್ ಸ್ಪೋಟ ಮನೆಯಲ್ಲಿದ್ದ ಹಣ ಹಾಗೂ ಕೆಲ ವಸ್ತುಗಳು ಸುಟ್ಟು ಭಷ್ಮ

Spread the love

ಕುಂದಗೋಳ: ಒಂದು ಸಣ್ಣ ಘಟನೆ ಬದುಕು ಕಟ್ಟಿ ಬೆಳೆಸಿದ ಒಂದು ಕುಟುಂಬದ ಅಸ್ತಿತ್ವವನ್ನೇ ಪ್ರಶ್ನಿಸಿದೆ. ಗೃಹಪಯೋಗಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಇಡೀ ಮನೆ ಹೊತ್ತಿ ಉರಿದಿದ್ದು, ಕಿಮ್ಮತ್ತಿನ ವಸ್ತುಗಳು ಸುಟ್ಟು ಭಸ್ಮವಾಗಿವೆ. ಈ ದುರಂತ ಘಟನೆ ಕುಂದಗೋಳ ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದಿದೆ.

ಏನಾಯಿತು?
ಗುಡಗೇರಿ ಗ್ರಾಮದ ಮಾಬುಲಿ ಹಜರೇಸಾಬ್ ಕಣವಿ ಎಂಬುವವರ ಮನೆ, ಸೋಮವಾರ ಬೆಳಿಗ್ಗೆ ಸಂಭವಿಸಿದ ದುರಂತಕ್ಕೆ ಸಾಕ್ಷಿಯಾಗಿದೆ. ಅಡುಗೆ ಮನೆಯಲ್ಲಿ ಗೃಹಪಯೋಗಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾದ ಪರಿಣಾಮ ಭೀಕರ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನು ಆವರಿಸಿಕೊಂಡಿದ್ದು, ಬದುಕು ನಿರ್ಮಿಸಿಕೊಂಡಿದ್ದ ಕನಸುಗಳು ಆ ಕ್ಷಣವೇ ನುಚ್ಚುನೂರಾಗಿವೆ.

ಮನೆಯಲ್ಲಿದ್ದ ಅಡುಗೆ ಪಾತ್ರೆಗಳಿಂದ ಹಿಡಿದು, ವಿದ್ಯುತ್ ಉಪಕರಣಗಳು ಮತ್ತು ಬಹುಮುಖ್ಯವಾಗಿ ಕಷ್ಟಪಟ್ಟು ಕೂಡಿಟ್ಟಿದ್ದ ₹40,000 ನಗದು ಹಣವೂ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ದುರಂತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಒಂದು ಕುಟುಂಬದ ಭವಿಷ್ಯ ಅಕ್ಷರಶಃ ಧಗಧಗನೆ ಉರಿದು ಸಮಸ್ಯೆತದ್ದೊಂಡಿದೆ.

ಅಗ್ನಿಶಾಮಕ ದಳ ಆಗಮಿಸುವ ಮೊದಲೇ ಸ್ಥಳೀಯರು ತಮ್ಮ ಜೀವದ ಹಂಗು ತೊರೆದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಘಟನೆ, ಗೃಹ ಬಳಕೆಯ ಸಿಲಿಂಡರ್‌ ಬಳಸುವಾಗ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಒಂದು ಕಠಿಣ ಪಾಠವಾಗಿದೆ.

ಈ ಪ್ರಕರಣ ಗುಡಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published. Required fields are marked *