ಶುಕ್ರವಾರ, 27 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಆ್ಯಪ್ ಡೌನ್‌ಲೋಡ್ | ಸುದ್ದಿ ಕಳುಹಿಸಿ | ಸಂಪರ್ಕಿಸಿ |
|
ಶುಕ್ರವಾರ, 27 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
video feed

ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ರವಿ ಹಂಜೆ ವಿರುದ್ಧ ಕ್ರಮಕ್ಕೆ ವೀರಶೈವ ಲಿಂಗಾಯತ ಮಹಾಸಭೆ ಒತ್ತಾಯ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ರವಿ ಹಂಜೆ ವಿರುದ್ಧ ಕ್ರಮಕ್ಕೆ ವೀರಶೈವ ಲಿಂಗಾಯತ ಮಹಾಸಭೆ ಒತ್ತಾಯ
  • Spread the loveಕುಂದಗೋಳ: ವಿಶ್ವಗುರು ಬಸವಣ್ಣನವರು ಹಾಗೂ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love
ಕುಂದಗೋಳ: ವಿಶ್ವಗುರು ಬಸವಣ್ಣನವರು ಹಾಗೂ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜೆ ವಿರುದ್ಧ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಹಾಗೂ ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಕುಂದಗೋಳ ತಾಲೂಕು ಘಟಕ ಒತ್ತಾಯಿಸಿದೆ. ಈಕುರಿತು ಪಟ್ಟಣದ ಗಾಳಿಮರೆಮ್ಮ ದೇವಸ್ಥಾನದ ಮೂಲಕ ಪ್ರತಿಭಟನೆ ನಡೆಸಿ ನಂತರ ಕುಂದಗೋಳ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಲ್ಲಿಸಿರುವ ದೂರಿನಲ್ಲಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಆಧಾರರಹಿತ ಆರೋಪಗಳನ್ನು ಮಾಡಿರುವುದು ಬಸವ ಭಕ್ತರು ಹಾಗೂ ವೀರಶೈವ ಲಿಂಗಾಯತ ಸಮುದಾಯದವರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ತಿಳಿಸಲಾಗಿದೆ. ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎಂದು ಕರೆದಿರುವುದಲ್ಲದೆ, ಬಿಜ್ಜಳನ ಖಜಾನೆಯನ್ನು ದುರುಪಯೋಗಪಡಿಸಿಕೊಂಡು ಶರಣರ ದಾಸೋಹ ನಡೆಸಿದ್ದರು ಎಂಬಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂವಿಧಾನದತ್ತ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹಾಸಭೆ ಗೌರವ ನೀಡುತ್ತದೆ. ಆದರೆ, ಅದರ ಹೆಸರಿನಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ರವಿ ಹಂಜೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಿವಾದಿತ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಹಾಸಭೆ ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಅಭಿನವ ಬಸವಣ್ಣಜ್ಜನವರು, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ. ಎಸ್ .ಅಕ್ಕಿ, ಉಮೇಶ ಹೆಬಸೂರು, ಎ.ಬಿ. ಉಪ್ಪಿನ, ಸೋಮರಾವ್ ದೇಸಾಯಿ, ಶಂಕರಗೌಡ ದೊಡಮನಿ, ಶಿವಾನಂದ ನವಲಗುಂದ, ಬಸಲಿಂಗಪ್ಪ ಎಂ. ಕೋರಿ, ವಿರೇಶ ಪ್ರಳೆಕಲ್ಮಠ, ದ್ವಾರಕಾನಾಥ ಸಿ. ಹಿರೇಮಠ, ಸೋಮಣ್ಣ ಮೇಟಿ, ಗಂಗಾಧರ ಕೋಳಿವಾಡ, ಚನ್ನವೀರಪ್ಪ ರಡೇರ, ಬಸವರಾಜ ಪಲ್ಲೇದ, ವಿದ್ಯಾಧರ ಸುಂಕದ, ನಿಜಲಿಂಗಪ್ಪ ಮುಗಳಿ, ರಮೇಶ ಇಂಗಳಹಳ್ಳಿ, ಉಮೇಶ ಪಲ್ಲೇದ ಹಾಗೂ ಶಿವಲಿಂಗಪ್ಪ ನಾಗಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕ್ಷಣ ಕ್ಷಣದ ಸುದ್ದಿಗಾಗಿ ವೀಕ್ಷಿಸಿ, ಮಾಯ್ ಪಬ್ಲಿಕ್ ಸಮಾಚಾರ.

ಸ್ಥಳ: ಕುಂದಗೋಳ (Kundgol) | ವರದಿಗಾರರು: girish.p.s

ADVERTISEMENT