ಶುಕ್ರವಾರ, 27 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಆ್ಯಪ್ ಡೌನ್‌ಲೋಡ್ | ಸುದ್ದಿ ಕಳುಹಿಸಿ | ಸಂಪರ್ಕಿಸಿ |
|
ಶುಕ್ರವಾರ, 27 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
video feed

ಹಾವೇರಿಯಲ್ಲಿ ₹59.84 ಲಕ್ಷ ಮೌಲ್ಯದ ಬಿಯರ್ ಧ್ವಂಸ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಹಾವೇರಿಯಲ್ಲಿ ₹59.84 ಲಕ್ಷ ಮೌಲ್ಯದ ಬಿಯರ್ ಧ್ವಂಸ
  • Spread the loveಹಾವೇರಿ: ಮಾರುಕಟ್ಟೆಯಲ್ಲಿ ಮಾರಾಟವಾಗದೆ ದಾಸ್ತಾನಾಗಿ ಉಳಿದಿದ್ದ ಬರೋಬ್ಬರಿ ₹59.84 ಲಕ್ಷ ಮೌಲ್ಯದ ಬಿಯರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಹಾವೇರಿ ತಾಲೂಕಿನ ಯತ್ತಿನಹಳ್ಳಿ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love
ಹಾವೇರಿ: ಮಾರುಕಟ್ಟೆಯಲ್ಲಿ ಮಾರಾಟವಾಗದೆ ದಾಸ್ತಾನಾಗಿ ಉಳಿದಿದ್ದ ಬರೋಬ್ಬರಿ ₹59.84 ಲಕ್ಷ ಮೌಲ್ಯದ ಬಿಯರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಕೆಎಸ್‌ಎಬಿಸಿಎಲ್ ಡಿಪೋದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅವಧಿ ಮುಗಿದು ಮಾನವ ಸೇವನೆಗೆ ಅನುಪಯುಕ್ತವಾಗಿದ್ದ ಒಟ್ಟು 19,747 ಲೀಟರ್ ಬಿಯರ್ ಅನ್ನು ಲಾರಿ ಚಕ್ರದಡಿ ಹಾಕಿ ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಒಟ್ಟು 2,092 ಬಾಕ್ಸ್ ಹಾಗೂ 60 ಬಾಟಲಿಗಳಲ್ಲಿದ್ದ ಬಿಯರ್ ದಾಸ್ತಾನನ್ನು ಡಿಪೋದಿಂದ ಹೊರತೆಗೆದು ಧ್ವಂಸಗೊಳಿಸಲಾಯಿತು. ಬೃಹತ್ ಲಾರಿಯನ್ನು ಬಿಯರ್ ಬಾಟಲಿಗಳ ಮೇಲೆ ಹರಿಸುವ ಮೂಲಕ ಸಾವಿರಾರು ಬಾಟಲಿಗಳನ್ನು ಪುಡಿಪುಡಿ ಮಾಡಲಾಯಿತು. ಬಾಟಲಿಗಳು ಒಡೆದು ಬಿಯರ್ ನೆಲದ ಮೇಲೆ ಹರಿಯಿತು. ಅವಧಿ ಮುಗಿದಿದ್ದರಿಂದ ಬಿಯರ್ ಮಾನವ ಸೇವನೆಗೆ ಯೋಗ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಹಾವೇರಿ ತಹಶೀಲ್ದಾರ್ ಶರಣಮ್ಮ ಹಾಗೂ ಅಬಕಾರಿ ಉಪ ಅಧೀಕ್ಷಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳ: ಹಾವೇರಿ | ವರದಿಗಾರರು: girish.p.s

ADVERTISEMENT