ಪೌರಕಾರ್ಮಿಕರಿಗೆ ದೀಪಾವಳಿ ಉಡುಗೊರೆ ವಿತರಣೆ; ಸಭಾ ನಾಯಕ ಶಿವು ಮೆಣಸಿನಕಾಯಿ ಅವರಿಂದ ಸನ್ಮಾನ!

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ. 67ರಲ್ಲಿ ಪೌರಕಾರ್ಮಿಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಭಾ ನಾಯಕರಾದ ಶಿವು ಮೆಣಸಿನಕಾಯಿ ಅವರು ಪೌರಕಾರ್ಮಿಕರನ್ನು ಸನ್ಮಾನಿಸಿ ದೀಪಾವಳಿ ಹಬ್ಬದ ಉಡುಗೊರೆಗಳನ್ನು ವಿತರಿಸಿದರು. ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗೂ ಸಿಹಿ ಮತ್ತು ಪುರುಷ ಪೌರಕಾರ್ಮಿಕರಿಗೆ ಒಂದು ಜೊತೆ ಪ್ಯಾಂಟ್-ಶರ್ಟ್ ಬಟ್ಟೆ ಹಾಗೂ ಸಿಹಿ ವಿತರಿಸುವ ಮೂಲಕ ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಭಾ ನಾಯಕ ಶಿವು ಮೆಣಸಿನಕಾಯಿ ಅವರು, ಕೊರೊನಾ ಸಂಕಷ್ಟದ ಸಮಯದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರವನ್ನು ಸ್ವಚ್ಛವಾಗಿಡಲು ಶ್ರಮಿಸಿದ ಪೌರಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ. ವಾರ್ಡ್‌ನಲ್ಲಿ ಪ್ರತಿನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಜೊತೆಗೆ ಪ್ರತಿ ವಾರ ನಡೆಯುವ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಾರ್ಡ್ ಸುಂದರ ಹಾಗೂ ಸ್ವಚ್ಛವಾಗಿರಲು ಶ್ರಮಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ದುರ್ಗಮ್ಮ ಬಿಜವಾಡ ಅವರು ಕೂಡ ಪೌರಕಾರ್ಮಿಕರಿಗೆ ದೀಪಾವಳಿ ಉಡುಗೊರೆಗಳನ್ನು ವಿತರಿಸಿ ಶುಭ ಹಾರೈಸಿದರು. ಇದೇ ವೇಳೆ ವಾರ್ಡ್‌ನಲ್ಲಿ ಶಿವು ಮೆಣಸಿನಕಾಯಿ ಅವರು ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ವಲಯ ಅಧಿಕಾರಿಗಳಾದ ಜಗದೀಶ ದೊಡ್ಡಮನಿ, ಕೆ.ಎಂ. ನದಾಫ್, ನೂರಂದಪ್ಪ ಭಜಂತ್ರಿ, ಮಂಜುನಾಥ ಕೆಂಪಣ್ಣನವರ, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಶಂಕ್ರಪ್ಪ ಟೋಪಗಿ, ಕಲ್ಲಪ್ಪ ಗುಡ್ಡದ, ರಾಜು ಕೋರ್ಯಾಣಮಠ, ಬಸವರಾಜ ಇಚ್ಚಂಗಿ, ಈರಯ್ಯ ಮುಳಗುಂದಮಠ, ರವಿ ಅಣ್ಣಿಗೇರಿ, ನಿರ್ಮಲಾ ಟೋಪಗಿ, ಅನಿತಾ ಮಾತಾಡೆ, ಆನಂದ ಸಂಗಪ್ಪ ಹಾಗೂ ಕೂಕನೂರ ಓಣಿಯ ಪೌರಕಾರ್ಮಿಕರು ಸೇರಿದಂತೆ ಹಲವು ಗುರುಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *