ಈದ್ ಮಿಲಾದ್‌ನಲ್ಲಿ ಧಾರ್ಮಿಕ ಸೌಹಾರ್ದತೆ: ಒಗ್ಗಟ್ಟಿನಿಂದ ಬಾಳೋಣ ಎಂದು ಶ್ರೀಗಳಿಂದ ಕರೆ

Spread the love

ಕುಂದಗೋಳ: ಪ್ರತಿ ವರ್ಷದಂತೆ ಈ ವರ್ಷವೂ ಕುಂದಗೋಳದಲ್ಲಿ ಈದ್ ಮಿಲಾದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ, ಜಾತಿಭೇದ ಮರೆತು ಆಚರಿಸಿ, ‘ನಾವೆಲ್ಲರೂ ಒಂದು’ ಎಂಬ ಸಂದೇಶ ಸಾರುವದು ವಿಷೇಶವಾಗಿರುತ್ತದೆ. ಪಂಚಗೃಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮುಸ್ಲಿಂ ಬಾಂಧವರನ್ನು ಶ್ಲಾಘಿಸಿದರು.

ಮುಸ್ಲಿಂ ಬಾಂಧವರು ನೀಡಿದ ಸೌಹಾರ್ದತೆಯ ಸಂದೇಶ ಪ್ರಶಂಸನೀಯ. ನಾವೆಲ್ಲರೂ ಒಟ್ಟಾಗಿ ಬದುಕುವ ಮೂಲಕ ಸೌಹಾರ್ದತೆಯನ್ನು ಹೆಚ್ಚಿಸಿ. ಭವಿಷ್ಯದಲ್ಲಿಯೂ ಎಲ್ಲರೂ ಹೀಗೆ ಒಗ್ಗಟ್ಟಿನಿಂದ ಬಾಳೋಣ” ಎಂದು ಶ್ರೀಗಳು ಕರೆ ನೀಡಿದರು. ಅವರ ಈ ಮಾತುಗಳು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದವು.

ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀಗಳು, ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು, ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮತ್ತು ಸಹಕಾರಿ ಧುರೀಣ ಅರವಿಂದ ಎಂ. ಕಟಗಿ ಅವರು ಜಂಟಿಯಾಗಿ ಚಾಲನೆ ನೀಡಿದರು.

ಈ ಸಮಯದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿಯವರು: ಮಾತನಾಡಿ ಈದ್ ಮಿಲಾದ್ ಕೇವಲ ಧಾರ್ಮಿಕ ಹಬ್ಬವಲ್ಲ, ಇದು ಮಾನವೀಯ ಮೌಲ್ಯಗಳು ಮತ್ತು ಸೌಹಾರ್ದತೆಯನ್ನು ಸಾರುವ ಹಬ್ಬ. ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಆಚರಿಸುತ್ತಿರುವುದು ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ನಂತರ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ: ಈದ್ ಮಿಲಾದ್ ಹಬ್ಬವು ಮಾನವೀಯತೆಯನ್ನು ಬೆಸೆಯುವ ಸೇತುವೆ. ಎಲ್ಲರೂ ಒಟ್ಟಾಗಿ ಬದುಕುವ ಮೂಲಕ ಸಮಾಜವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಖಹಿಂ ನಾಲಬಂದ, ಆರ್. ಎಚ್. ಕಳ್ಳಿಮನಿ, ಸಲೀಂ ಕ್ಯಾಲಕೊಂಡ, ಎ. ಟಿ. ಹುಬ್ಬಳ್ಳಿ, ಮಲ್ಲಿಕ್ ಶಿರೂರ, ಬಾಬಾಜಾನ್ ಮಿಶ್ರೀಕೋಟಿ, ಸಲೀಂ ಕಡ್ಲಿ, ನಾಸಿರ್ ಬಾನಿ, ಮೌಲಾಸಾಬ್ ಶೇರವಾಡ, ಜಾಕಿರ್ ಹುಸೇನ್ ಯರಗುಪ್ಪಿ, ಹಜರತ್ ಅಲಿ ಕರ್ಜಗಿ, ಸಲೀಂ ಜಾಗಿರ್ದಾರ, ಮಹಮ್ಮದ್ ರಫಿಕ್ ಶೇರವಾಡ, ಮರ್ದಾನಿ ಮುಲ್ಲಾ, ಎಂ. ಎಂ. ಜಂಗ್ಲಿ, ಮಹಮ್ಮದ್ ಗೌಸ್ ಕಲೇಗಾರ, ಮಾಬೂಬ್‌ಅಲಿ ನದಾಫ್, ದಾದಾಪೀರ ಮುಲ್ಲಾ,ಬಾಬುಸಾಬ ಮಿಶ್ರೀಕೋಟಿ ಸೇರಿದಂತೆ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *