ಯಲಿವಾಳದಿಂದ ಕೂಬಿಹಾಳ ಕ್ರಾಸ್ ಬಳಿ ಮರಕ್ಕೆ ಎಸ್‌ವಿ ಜೆ ಶಾಲಾ ವಾಹನ ಡಿಕ್ಕಿ; ತಪ್ಪಿದ ಭಾರಿ ಅನಾಹುತ

Spread the love

ಹುಬ್ಬಳ್ಳಿ: ತಾಲ್ಲೂಕಿನ ಪಾಳಾ ಗ್ರಾಮದ ಎಸ್‌ವಿ ಜೆ ಶಾಲೆಗೆ ಸೇರಿದ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಮುಂಜಾನೆ ಸುಮಾರು 9.30ರ ವೇಳೆಗೆ ಕುಬಿಹಾಳದಿಂದ ಯಲಿವಾಳ ಕ್ರಾಸ್‌ ಕಡೆಗೆ ತೆರಳುತ್ತಿದ್ದಾಗ ನಡೆದಿದೆ. ಅಪಘಾತದ ಪರಿಣಾಮ ವಾಹನದ ಮುಂಭಾಗದ ಭಾಗ ಸ್ವಲ್ಪ ನಂಜು ಗುಂಜಾಗಿ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಾಹನ ಚಾಲನೆ ಮಾಡುವ ವೇಳೆ ಚಾಲಕ ಮೊಬೈಲ್‌ ಕರೆಯಲ್ಲಿ ಮಾತನಾಡುತ್ತಿದ್ದ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಚಾಲಕನ ನಿರ್ಲಕ್ಷ್ಯದಿಂದಲೇ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಲಾ ವಾಹನಗಳ ಚಾಲಕರು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ವಾಹನ ಚಲಾಯಿಸುವಾಗ ಮೊಬೈಲ್ ಬಳಸದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಘಟನೆ ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published. Required fields are marked *