ಜಿಂಕೆಯನ್ನು ನುಂಗಿದ ಹೆಬ್ಬಾವು; ಚಲಿಸಲು ಹರಸಾಹಸ ಪಟ್ಟ ಅಪರೂಪದ ಘಟನೆ
ಮಳವಳ್ಳಿ: ಬೃಹತ್ ಗಾತ್ರದ ಹೆಬ್ಬಾವು ಜಿಂಕೆಯನ್ನು ನುಂಗಿದ ಬಳಿಕ ಚಲಿಸಲು ಹರಸಾಹಸ ಪಟ್ಟ ಅಪರೂಪದ ಘಟನೆ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ. ನೆಟ್ಕಲ್ ಗ್ರಾಮದ ಬಳಿ ಬೆಂಗಳೂರು ಜಲಮಂಡಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹಾದು ಹೋಗುವ ಅರಣ್ಯ ಪ್ರದೇಶದ ಸಮೀಪ ಈ ಹೆಬ್ಬಾವು ಪತ್ತೆಯಾಗಿದೆ. ದೊಡ್ಡ ಗಾತ್ರದ ಜಿಂಕೆಯನ್ನು ನುಂಗಿದ್ದರಿಂದ ಹೆಬ್ಬಾವು ಚಲಿಸಲು ಸಾಧ್ಯವಾಗದೇ ಅಲ್ಲೇ ಕುಂಠಿತ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯ ರೈತರು ಹಾಗೂ ಜಾನುವಾರು ಮೇಯಿಸುತ್ತಿದ್ದ…

