ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಖ್ಯಾತ ಗಾಯಕ ಅಶೋಕ ಹುಗ್ಗಣ್ಣವರ ವಿಧಿವಶ
ಹುಬ್ಬಳ್ಳಿ: ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಪ್ರತಿಭೆ, ಗ್ವಾಲಿಯರ್ ಘರಾನಾದ ಗಾಯನ ಶೈಲಿಯಿಂದ ಮನೆಮಾತಾಗಿದ್ದ ನಿವೃತ್ತ ಸಂಗೀತ ಪ್ರಾಧ್ಯಾಪಕ ಅಶೋಕ ಹುಗ್ಗಣ್ಣವರ (64) ಅವರು ಬುಧವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂಲತಃ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದವರಾದ ಇವರು, ಹೊನ್ನಾವರದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ದೀರ್ಘಕಾಲ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತಿ ಹೊಂದಿದ್ದರು.ನಿವೃತ್ತಿಯ ಬಳಿಕ ಹುಬ್ಬಳ್ಳಿಯ ಉಣಕಲ್‌ನಲ್ಲಿ ನೆಲೆಸಿದ್ದ ಅಶೋಕ ಹುಗ್ಗಣ್ಣವರ ಅವರು, ಇಡೀ ಬದುಕನ್ನು ಸಂಗೀತ ಸಾದನೆ ಹಾಗೂ…

