ನ:20 ರಿಂದ 22 ರವರೆಗೆ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಆಯೋಜನೆ

ಧಾರವಾಡ ನ.19: ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ನವೆಂಬರ್ 20 ರಿಂದ 22, 2025 ರವರೆಗೆ ಧಾರವಾಡ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನ ಡಿಎಆರ್ ಕೇಂದ್ರಸ್ಥಾನದ ಪರೇಡ್ ಮೈದಾನದಲ್ಲಿ ಭವ್ಯವಾಗಿ ನಡೆಸಲಾಗುತ್ತಿದೆ. ನವೆಂಬರ್ 20ರಂದು ಬೆಳಿಗ್ಗೆ 8:30ಕ್ಕೆ ಇದೇ ಪರೇಡ್ ಮೈದಾನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಅವರು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿದ್ದು, ಜಿಲ್ಲೆಯ ವಿವಿಧ ವಿಭಾಗಗಳ ಪೊಲೀಸ್ ಸಿಬ್ಬಂದಿ…

Read More

ರೇಣುಕಾ ಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಧಾರವಾಡ ನ.19: ಮಲಪ್ರಭಾ ಯೋಜನಾ ವಲಯದಡಿಯಲ್ಲಿ ಬರುವ ರೇಣುಕಾ ಸಾಗರ ಜಲಾಶಯ ನವಿಲುತೀರ್ಥದಿಂದ ನವೆಂಬರ್ 11, 2025ರಿಂದ ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ, ಕೊಳಚಿ ಬಲದಂಡೆ ಕಾಲುವೆ ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ ಕೃಷಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ (ತಮ್ಮ ಕ್ಷೇತ್ರದ 60 ಪ್ರತಿಶತ ಭಾಗದಲ್ಲಿ) ಬೆಳೆಸಲು ಹಾಗೂ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಸೂಚಿಸಲಾಗಿದೆ. ಜೊತೆಗೆ, ಮುಖ್ಯ ಕಾಲುವೆ ದಡದಲ್ಲಿ ಈಜಾಡಲು,…

Read More

ವಾಯುಮಿತ್ರ ಕೌಶಲ್ಯ ಅಭಿವೃದ್ಧಿ ಯೋಜನೆ: ವಿಂಡ್ ಫಾರ್ಮ್ ಎಂಜಿನಿಯರ್ ತರಬೇತಿಗೆ ನೋಂದಣಿ ಪ್ರಾರಂಭ

ಧಾರವಾಡ.19: ಚೆನ್ನೈಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ ಮಾನ್ಯತೆ ಪಡೆದ ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ವಾಯುಮಿತ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ‘ವಿಂಡ್ ಫಾರ್ಮ್ ಎಂಜಿನಿಯರ್ (ಹಂತ–5)’ ತರಬೇತಿ ಕಾರ್ಯಕ್ರಮವನ್ನು ಡಿಸೆಂಬರ್ 2025ರಲ್ಲಿ ಬೆಳಗಾವಿಯ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನದ ವಿಂಡ್ ಎನರ್ಜಿ ಕ್ಷೇತ್ರದಲ್ಲಿ ವೃತ್ತಿ ಬೆಳೆಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಹಾಗೂ ಸುವರ್ಣಾವಕಾಶವಾಗಿದೆ….

Read More

‘ಹಾಡಿರೇ ರಾಗಗಳ–ತೂಗಿರೇ ದೀಪಗಳ’: ತಳಸಮುದಾಯದ ಕಲಾವಿದರಿಗೆ ಪ್ರೋತ್ಸಾಹಿಸಲು ವಿಶೇಷ ಘಟಕ ಯೋಜನೆ

ಧಾರವಾಡ ನ.19: ಗ್ರಾಮೀಣ ಭಾಗದ ತಳಸಮುದಾಯದ ಪರಿಶಿಷ್ಟ ಜಾತಿಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ವಿಶೇಷ ಘಟಕ ಯೋಜನೆ ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು. ಅವರು ಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಹಾಡಿರೇ ರಾಗಗಳ–ತೂಗಿರೇ ದೀಪಗಳ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಯೋಜನೆಗಳಿಂದ ಗ್ರಾಮೀಣ ಹಾಗೂ ತಳ ಸಮುದಾಯದ ಜಾನಪದ ಕಲಾವಿದರಿಗೆ ಹೆಚ್ಚಿನ ವೇದಿಕೆಗಳು…

Read More

ಯುವನಿಧಿ ಯೋಜನೆಯ ಸದುಪಯೋಗ ಪಡೆಯಲು ಕರೆ: ಎಂ.ಎಂ. ಕುದುರಗೊಂಡ

ನವಲಗುಂದ: ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ‘ಯುವನಿಧಿ’ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು. ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ (ನವಲಗುಂದ), ಜಿಲ್ಲಾ ಉದ್ಯೋಗ ಮಾಹಿತಿ ಕೇಂದ್ರ (ಹುಬ್ಬಳ್ಳಿ) ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ 18 ನವೆಂಬರ್ 2025 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಚಿಲಕವಾಡ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುಳಾ ಕಲ್ಯಾಣಿ…

Read More

ಸಂಡೂರು ಪಿಐ ವಿರುದ್ಧ ಎಫ್‌ಐಆರ್ ದಾಖಲಿಸಿ: ಬಳ್ಳಾರಿ ಎಸ್‌ಪಿಗೆ ಹೈಕೋರ್ಟ್ ನಿರ್ದೇಶನ

ಧಾರವಾಡ: ಸಂಡೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ವಿರುದ್ಧ ಹಲ್ಲೆ ಆರೋಪದ ಹಿನ್ನೆಲೆ, ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ, ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿದಾರ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿದ ನಂತರ ಈ ನಿರ್ದೇಶನ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದ ವಿ….

Read More

ಮೂರು ಪ್ರಮುಖ ತಂತ್ರಜ್ಞಾನ ನೀತಿಗಳೊಂದಿಗೆ ‘ಬೆಂಗಳೂರು ಟೆಕ್ ಶೃಂಗಸಭೆ-2025’ ಆರಂಭ: ಸಿಎಂ ಸಿದ್ದರಾಮಯ್ಯ

​ಬೆಂಗಳೂರು: ​ನವೆಂಬರ್ 18 ರಿಂದ 20, 2025 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯುತ್ತಿರುವ ‘ಬೆಂಗಳೂರು ಟೆಕ್ ಶೃಂಗಸಭೆ-2025’ (BTS) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಮೂರು ಪ್ರಮುಖ ತಂತ್ರಜ್ಞಾನ ನೀತಿಗಳನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು. ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮೋದನೆಗಳು ಮತ್ತು ಪೂರಕ ವಾತಾವರಣವು ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವನ್ನಾಗಿ ಮುಂದುವರೆಸಿದೆ ಎಂದು ಅವರು ಅಭಿಪ್ರಾಯಪಟ್ಟರು….

Read More

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ನವೆಂಬರ್ 19ರಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

​ಧಾರವಾಡ: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ-2025ರ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ಒಂದು ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ, ದಿನಾಂಕ ನವೆಂಬರ್ 19, 2025 ರಂದು ಸಂಜೆ 5:30 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ​ಈ ಕಾರ್ಯಕ್ರಮಕ್ಕೆ ಧಾರವಾಡದ ಎಂ. ಎಸ್. ಪಾಟೀಲ ಅವರು ಚಾಲನೆ ನೀಡಲಿದ್ದಾರೆ. ನರೇಂದ್ರದ ಸಂಗೀತಗಾರರಾದ ಆನಂದ ಪಾಟೀಲ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದರ ಜೊತೆಗೆ,…

Read More

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ನವೆಂಬರ್ 19ರಂದು ‘ಧರೆಗೆ ದೊಡ್ಡವರು’ ಸಂವಾದ ಕಾರ್ಯಕ್ರಮ

​ ​ಧಾರವಾಡ: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ-2025ರ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ಒಂದು ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ, ದಿನಾಂಕ ನವೆಂಬರ್ 19, 2025 ರಂದು ಬೆಳಿಗ್ಗೆ 11 ಗಂಟೆಗೆ ‘ಧರೆಗೆ ದೊಡ್ಡವರು’ ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ​ಈ ಕಾರ್ಯಕ್ರಮದಲ್ಲಿ ಧಾರವಾಡದ ಮೋಡಿಲಿಪಿ ತಜ್ಞರು ಮತ್ತು ವಿದ್ವಾಂಸರಾದ ಪ್ರೊ. ಎಂ.ವಾಯ್. ಸಾವಂತ ಅವರು ‘ಧರೆಗೆ ದೊಡ್ಡವ’ರಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ…

Read More

ಪಂ. ಬಸವರಾಜ ರಾಜಗುರು ಸ್ಮರಣೆಯಲ್ಲಿ ನ. 22 ಮತ್ತು 23ಕ್ಕೆ ವಚನ ಸಂಗೀತೋತ್ಸವ ಆಯೋಜನೆ

ಧಾರವಾಡ, ನ. 18: ಪದ್ಮಭೂಷಣ ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ, ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ವಚನ ಸಂಗೀತೋತ್ಸವ–2025 ಕಾರ್ಯಕ್ರಮವನ್ನು ನವೆಂಬರ್ 22 ಮತ್ತು 23, 2025 ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಪಂ. ಕೈವಲ್ಯಕುಮಾರ ಗುರವ ಅವರು ಪ್ರಕಟಿಸಿದರು. ಅವರು ಮಂಗಳವಾರದಂದು(ನ. 18) ಸಂಜೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ…

Read More