ಕಲೆ, ಸಂಸ್ಕೃತಿ ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಬಿಇಒ ಮಹಾದೇವಿ ಮಾಡಲಗೇರಿ ಕರೆ
ಕುಂದಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಕುಂದಗೋಳ: ಶಿಕ್ಷಣವು ಕೇವಲ ಜ್ಞಾನವನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲ, ಬದಲಿಗೆ ನಮ್ಮ ಜೀವನದ ಶ್ರೇಷ್ಠತೆಯನ್ನು ತಲುಪುವ ಮಾರ್ಗವಾಗಿದೆ. ಆದ್ದರಿಂದ ಮಕ್ಕಳು ಕಲೆ, ಸಂಸ್ಕೃತಿ ಮತ್ತು ಜಾಣ್ಮೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಹಾದೇವಿ ಮಾಡಲಗೇರಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ಪಟ್ಟಣದ ಶ್ರೀ ಎಫ್. ಕೆ. ಬಾಳಿಹಳ್ಳಿಮಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ…

