‘ಜೈ ಭೀಮ ಯುವ ಶಕ್ತಿ ಸೇನಾ’ದಿಂದ ಸರ್ವಧರ್ಮ ಸಾಮೂಹಿಕ ವಿವಾಹ ಯಶಸ್ವಿ

ವರದಿ: ವಿನಾಯಕ ಗುಡ್ಡದಕೇರಿ ಬಡ ಕುಟುಂಬಗಳಿಗೆ ಉಚಿತ ವಿವಾಹ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಭ ಹಾರೈಕೆ ​ಧಾರವಾಡ: ಜೈ ಭೀಮ ಯುವ ಶಕ್ತಿ ಸೇನಾ (ರಿ) ಸಂಘಟನೆಯ ವತಿಯಿಂದ ಹುಬ್ಬಳ್ಳಿ ನಗರದ ಕರ್ಕಿ ಬಸವೇಶ್ವರ ನಗರದ ಮುಖ್ಯದ್ವಾರದ ಎದುರುಗಡೆ ಸರ್ವಧರ್ಮದ ಬಡ ಕುಟುಂಬಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ​ಹುಬ್ಬಳ್ಳಿಯ ಸಿದ್ದಾರೂಢ ಮಠದ ಪರಮಪೂಜ್ಯ ಬಸವಆನಂದ ಸ್ವಾಮಿಗಳು ಮತ್ತು ರುದ್ರಾಕ್ಷಿ ಮಠದ ಪರಮಪೂಜ್ಯ ಬಸವಲಿಂಗ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಈ ಪುಣ್ಯ ಕಾರ್ಯಕ್ರಮ…

Read More

ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಬೆಲೆಯಿದೆ: ಚಿಂತಕ ರಮೇಶ ಜಂಗಲ

​ಧಾರವಾಡ, ನ. 24: ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಬೆಲೆ ಇದೆ. ನಮ್ಮ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ನಾಟಕಗಳಿಗೆ ಇದೆ ಎಂದು ಬೆಳಗಾವಿಯ ಚಿಂತಕ ರಮೇಶ ಜಂಗಲ ಅವರು ಅಭಿಪ್ರಾಯಪಟ್ಟರು. ​ಕರ್ನಾಟಕ ವಿದ್ಯಾವರ್ಧಕ ಸಂಘವು (ಕವಿವ ಸಂಘ) ಆಯೋಜಿಸಿರುವ ಹತ್ತು ದಿನಗಳ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ‘ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ​ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗುವ ಎಂಟು ದಶಕಗಳ ಹಿಂದೆಯೇ ಕನ್ನಡ ಕಟ್ಟುವ ಕಾರ್ಯವನ್ನು ಈ ಸಂಘವು…

Read More

ನವೆಂಬರ್ 26ಕ್ಕೆ ಸಂವಿಧಾನ ದಿನ ಆಚರಣೆ: ಧಾರವಾಡದಲ್ಲಿ ಜಾಥಾ, ವಿಶೇಷ ಉಪನ್ಯಾಸ

ಧಾರವಾಡ, ನ. 24 : ಪ್ರತಿ ವರ್ಷದಂತೆ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲು ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಜಾಥಾ ಮತ್ತು ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ​ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಪ್ರದರ್ಶನದೊಂದಿಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸಲಿದ್ದಾರೆ. ಅಲ್ಲದೆ, ಜಾಥಾದುದ್ದಕ್ಕೂ ಡಾ|| ಬಿ.ಆರ್. ಅಂಬೇಡ್ಕರ್…

Read More

ಡಿಸೆಂಬರ್ 15ರೊಳಗೆ ವಿಮಾದಾರರ ಖಾತೆಗೆ ಬೋನಸ್ ಜಮೆ: ವಿಮಾ ಇಲಾಖೆ ಭರವಸೆ

ಧಾರವಾಡ, ನ. 24: ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ (ಕೆಜಿಐಡಿ) ವಿಮೆ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಇರುವ ಲಾಭಾಂಶ (ಬೋನಸ್) ಮೊತ್ತವನ್ನು ಡಿಸೆಂಬರ್ 15ರೊಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥ. ಸಿ. ಕಠಾರೆ ಅವರು ತಿಳಿಸಿದ್ದಾರೆ. ​ದಿನಾಂಕ: 1-4-2022 ರಿಂದ 31-3-2024ರ ಅವಧಿಯಲ್ಲಿ ಚಾಲ್ತಿಯಲ್ಲಿರುವ ಅಥವಾ ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ಪ್ರತಿ ₹1,000ಕ್ಕೆ ₹80ರಂತೆ ಬೋನಸ್ ನೀಡಲಾಗುತ್ತಿದೆ. ​⚙️…

Read More

ಮೆಕ್ಕೆಜೋಳ ಖರೀದಿಗೆ ಸರ್ಕಾರ ಬದ್ಧ: ಶಾಸಕ ಮತ್ತು ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆ; ನವಲಗುಂದ ರೈತರ ಉಪವಾಸ ಸತ್ಯಾಗ್ರಹ ಅಂತ್ಯ

ತಾಂತ್ರಿಕ ಗೊಂದಲ ಶೀಘ್ರ ಇತ್ಯರ್ಥ; ಪರಿಹಾರ ವಿತರಣೆಯಲ್ಲಿ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ​ಧಾರವಾಡ, ನ. 24: ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಆಗ್ರಹಿಸಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು, ಶಾಸಕ ಎನ್.ಎಚ್. ಕೋನರಡ್ಡಿ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಭರವಸೆಯ ನಂತರ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ​ಇಂದು ಬೆಳಿಗ್ಗೆ ಹೋರಾಟ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮತ್ತು ಜಿಲ್ಲಾಧಿಕಾರಿಗಳು,…

Read More

ಎಸ್‌.ಸಿ/ಎಸ್‌.ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಶಿಕ್ಷಕಿ ಚಂದ್ರಿಕಾ ಎಸ್ ಜೆ ಆಯ್ಕೆ

ಕುಂದಗೋಳ : ಕರ್ನಾಟಕ ರಾಜ್ಯ ಎಸ್‌.ಸಿ ಮತ್ತು ಎಸ್‌.ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ (ರಿ) ರಾಜ್ಯ ಸಂಘಟನೆಯ ಮಹಿಳಾ ಉಪಾಧ್ಯಕ್ಷರಾಗಿ ಕುಂದಗೋಳ ತಾಲ್ಲೂಕಿನ ಶಿಕ್ಷಕಿ ಶ್ರೀಮತಿ ಚಂದ್ರಿಕಾ ಪರಶುರಾಮ (ಎಸ್‌.ಜೆ) ಅವರನ್ನು ಆಯ್ಕೆ ಮಾಡಲಾಗಿದೆ. ಸದ್ಯ ವೃತ್ತಿಯಲ್ಲಿ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶ್ರೀಮತಿ ಚಂದ್ರಿಕಾ ಎಸ್‌.ಜೆ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ನಿಷ್ಠತೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ಈ ಮಹತ್ವದ ಹುದ್ದೆಗೆ…

Read More

ಧಾರವಾಡ ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸಿಐಟಿಯು ನೇತೃತ್ವದಲ್ಲಿ ಕುಂದಗೋಳದಲ್ಲಿ ಸಮ್ಮೇಳನ; ಮೂರು ವರ್ಷಗಳ ಅವಧಿಗೆ ನೂತನ ಸಮಿತಿ ರಚನೆ ​ಕುಂದಗೋಳ, ನ.24: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕುಂದಗೋಳದಲ್ಲಿ ನಡೆದ 9ನೇ ಧಾರವಾಡ ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘದ ಸಮ್ಮೇಳನವು ಮುಂದಿನ ಮೂರು ವರ್ಷಗಳ ಕಾಲಾವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು. ​ನವಂಬರ್ 22 ರಂದು ಕುಂದಗೋಳದ ಕಲ್ಯಾಣಪುರ ಬಸವಣ್ಣಜ್ಜ ಮಠದಲ್ಲಿ ಈ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು. ​ಸಿಐಟಿಯು ಜಿಲ್ಲಾ ಪ್ರಧಾನ…

Read More

ಹುಬ್ಬಳ್ಳಿಯಲ್ಲಿ ಇಂದು ‘ಮಿಸ್ಟರ್ ಕರ್ನಾಟಕ ಭಜರಂಗಿ-2025’ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ

​ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ & ಸ್ಪೋರ್ಟ್ಸ್‌ ವತಿಯಿಂದ ಬೃಹತ್ ಆಯೋಜನೆ ​ಹುಬ್ಬಳ್ಳಿ: ನವೆಂಬರ್ 23, 2025: ​ದೇಹದಾರ್ಡ್ಯ ಪಟುಗಳಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ, ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ & ಸ್ಪೋರ್ಟ್ಸ್ (DDBBA&S) ಹಾಗೂ ಪಂಚಮುಖಿ ಹನುಮಾನ ಕಮಿಟಿ ನವನಗರ ನವನಿರ್ಮಾಣ ಸಂಘ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಇಂದು (ನವೆಂಬರ್ 23, 2025) ರಾಜ್ಯ ಮಟ್ಟದ ‘ಮಿಸ್ಟರ್ ಕರ್ನಾಟಕ ಭಜರಂಗಿ-2025’ ದೇಹದಾರ್ಡ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಬೃಹತ್ ಕಾರ್ಯಕ್ರಮವು ಹುಬ್ಬಳ್ಳಿಯ…

Read More

ವೇದ ಸುಳ್ಳಾದರೂ ಗಾದೆ ಸುಳ್ಳಾಗದು: ಗಾದೆಗಳು ನಮ್ಮ ಬದುಕಿನ ಮೂಲ – ಗಂಗಾ ಚವಣ್ಣವರ

ಧಾರವಾಡ:ಗಾದೆಗಳು ನಮಗೆ ಜೀವನ ಪಾಠ ಕಲಿಸುವ ಪ್ರಬಲ ಮಾಧ್ಯಮಗಳಾಗಿವೆ. ಅವು ನಮ್ಮ ಹಿರಿಯರ ಲೋಕಾನುಭವದ ಬದುಕಿನ ಮಾತುಗಳಾಗಿದ್ದು, ವೇದ ಸುಳ್ಳಾದರೂ ಗಾದೆ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಜೆ.ಎಸ್.ಎಸ್. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಗಂಗಾ ಚವಣ್ಣವರ ಅವರು ಹೇಳಿದರು. ಶನಿವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಆನಂದ ಚಿಗಟೇರಿ ಸಂಸ್ಮರಣಾ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ’ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ​ಇಂದಿನ ತ್ವರಿತ ಕಾಲದಲ್ಲಿ ಕೇವಲ ಜ್ಞಾನವೊಂದಿದ್ದರೆ ಸಾಲದು,…

Read More

ಕೃಷಿ ಭೂಮಿಯ ಮೇಲೆ ಕರಾಳ ನೆರಳು: ಕುಂದಗೋಳದಲ್ಲಿ 79 ಅನಧಿಕೃತ ಆಸ್ತಿ ಪತ್ತೆ!

🌾 ಕೃಷಿ ಭೂಮಿಯ ಮೇಲೆ ಕರಾಳ ನೆರಳು: ಕುಂದಗೋಳದಲ್ಲಿ 79 ಅನಧಿಕೃತ ಆಸ್ತಿ ಪತ್ತೆ ಲಾಭದ ಆಸೆಗೆ ಸರ್ಕಾರಿ ನಿಯಮ ಗಾಳಿಗೆ ತೂರಿದ ಬಂಡವಾಳಶಾಹಿಗಳು: ಅನ್ನದಾತ ಕಂಗಾಲು ಕುಂದಗೋಳ: ವಾಣಿಜ್ಯ ರಾಜಧಾನಿ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ತಾಗಿಕೊಂಡಿರುವ ಕುಂದಗೋಳ ಪಟ್ಟಣವು ನಿರಂತರ ಆರ್ಥಿಕವಾಗಿ ಬೆಳೆಯುತ್ತಿರುವಂತೆಯೇ, ಇದರ ಕೃಷಿ ಭೂಮಿಯ ಮೇಲೆ ಇದೀಗ ಬಂಡವಾಳಶಾಹಿಗಳ ಕರಾಳ ನೆರಳು ಆವರಿಸಿದೆ. ಅನ್ನ ಬೆಳೆಯುವ ನೆಲವನ್ನೇ ಗುರಿಯಾಗಿಸಿಕೊಂಡಿರುವ ಕೆಲ ಭೂಗಳ್ಳರು ಮತ್ತು ಬಂಡವಾಳಶಾಹಿಗಳು, ರೈತರಿಗೆ ಹಣದ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಯಾವುದೇ ಕಾನೂನುಬದ್ಧ…

Read More