ಕುಂದಗೋಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಶೋಕ ಘೋರ್ಪಡೆ ಆಯ್ಕೆ

ಕುಂದಗೋಳ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಗೋಳ ತಾಲ್ಲೂಕು ಘಟಕದ ಪದಾಧಿಕಾರಿಗಳ ಚುನಾವಣೆ ಬುಧವಾರ ಪಟ್ಟಣದಲ್ಲಿ ಜರುಗಿದ್ದು, ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅಶೋಕ ಘೋರ್ಪಡೆ ಅವರು ಆಯ್ಕೆಯಾಗಿದ್ದಾರೆ. ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಶೋಕ ಘೋರ್ಪಡೆ ಹಾಗೂ ಖಾದರಸಾಬ ಡಗಲಿ ಅವರು ನಾಮಪತ್ರ ಸಲ್ಲಿಸಿದ್ದರು. ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಶೋಕ ಘೋರ್ಪಡೆ 04 ಮತಗಳನ್ನು ಪಡೆದು ಜಯಶಾಲಿಯಾದರು. ಇದೇ ವೇಳೆ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ದೀಪಾವಳಿ ಹಾಗೂ ಖಜಾಂಚಿಯಾಗಿ ಶೇಖಪ್ಪ ಕುಂದಗೋಳ ಅವರು ಅವಿರೋಧವಾಗಿ…

Read More

ಜಿಲ್ಲಾ ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಯೋಜನೆ: ನಿಖರ ದತ್ತಾಂಶ ಒದಗಿಸುವುದು ಇಲಾಖೆಗಳ ಕರ್ತವ್ಯ – ಎಚ್.ಶಶಿಧರ್

ಧಾರವಾಡ, ಜ. 20: ಜಿಲ್ಲಾ ಮಾನವ ಅಭಿವೃದ್ಧಿ ವರದಿ (DHDR)-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ (ISDDP)-2031ರ ತಯಾರಿಕೆಯಲ್ಲಿ ಸರ್ಕಾರಿ ಇಲಾಖೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಂದಿನ 5 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ನಿಖರವಾದ, ವಿಶ್ವಾಸಾರ್ಹ ಹಾಗೂ ವಾಸ್ತವಿಕ ಮಾಹಿತಿಯನ್ನು ಒದಗಿಸುವುದು ಪ್ರತಿಯೊಂದು ಇಲಾಖೆಯ ಕರ್ತವ್ಯವಾಗಿದೆ ಎಂದು ರಾಜ್ಯ ಸಂಪನ್ಮೂಲ ಅಧಿಕಾರಿ ಎಚ್.ಶಶಿಧರ್ ತಿಳಿಸಿದರು. ​ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಾನವ ಅಭಿವೃದ್ಧಿ ಯೋಜನೆ ಕುರಿತ ಒಂದು…

Read More

ಸೇವೆಯಿಂದ ನಿವೃತ್ತರಾದರೂ ‘ವೃತ್ತಿ’ಯಿಂದಲ್ಲ: ಸಂಬಳವಿಲ್ಲದೆ ಪಾಠ ಮುಂದುವರಿಸಿದ ಶಿಕ್ಷಕ!

ನವಲಗುಂದ: ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಕೆಲಸದಿಂದ ವಿರಮಿಸಲು ಕಾತುರರಾಗಿರುತ್ತಾರೆ. ಆದರೆ, ಇಲ್ಲೊಬ್ಬ ಶಿಕ್ಷಕರು ನಿವೃತ್ತರಾಗಿ ತಿಂಗಳುಗಳೇ ಕಳೆದರೂ, ಮಕ್ಕಳ ಮೇಲಿನ ಕಾಳಜಿಯಿಂದ ಸಂಬಳವಿಲ್ಲದೆ ಪಾಠ ಮುಂದುವರಿಸುವ ಮೂಲಕ ಮಾನವೀಯತೆಯ ಅಪರೂಪದ ಮಾದರಿಯಾಗಿದ್ದಾರೆ. ​ಪಟ್ಟಣದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ ನಂ-1ರ ಕನ್ನಡ ವಿಷಯದ ಶಿಕ್ಷಕರಾದ ಸತೀಶ ಕುಲಕರ್ಣಿ ಅವರೇ ಈ ಮಾದರಿ ವ್ಯಕ್ತಿತ್ವ. ಇವರು ಕಳೆದ 2025ರ ನವೆಂಬರ್ 30ರಂದು ಸರ್ಕಾರಿ ಸೇವೆಗೆ ಅಧಿಕೃತವಾಗಿ ನಿವೃತ್ತಿ ಹೊಂದಿದ್ದರು. ನಿಯಮದ ಪ್ರಕಾರ…

Read More

​ಕುಂದಗೋಳದ ಅಪ್ರಾಪ್ತ ಬಾಲಕನ ಬರ್ಬರ ಹತ್ಯೆ: ರಕ್ಷಣೆ ಮಾಡಬೇಕಾದ ಪೊಲೀಸರದ್ದೇ ನಿರ್ಲಕ್ಷ್ಯ? ಆರೋಪ? ಲಂಚ, ಗಾಂಜಾ ದಂಧೆಯ ಬಗ್ಗೆ ಶಾಸಕರ ಎದುರು ಸ್ಫೋಟಗೊಂಡ ಆಕ್ರೋಶ!

ಕುಂದಗೋಳ: ಶಾಂತಿ ಮತ್ತು ಸೌಹಾರ್ದತೆಗೆ ಹೆಸಾಗಿದ್ದ ಕುಂದಗೋಳ ಪಟ್ಟಣದಲ್ಲಿ ಜನವರಿ 13ರಂದು ನಡೆದ ಅಪ್ರಾಪ್ತ ಬಾಲಕನ ಭೀಕರ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ರಕ್ತಸಿಕ್ತ ಅಧ್ಯಾಯದ ಹಿಂದೆ ಮಕ್ಕಳನ್ನು ತಿದ್ದಬೇಕಾದ ಹಿರಿಯರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ‘ಅಕ್ಷಮ್ಯ ನಿರ್ಲಕ್ಷ್ಯ’ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ಪಟ್ಟಣದ ಸೊಸೈಟಿ ಆವರಣದಲ್ಲಿ ನಿಂಗರಾಜ್ ಮಲ್ಲಿಕಾರ್ಜುನ ಅವಾರಿ ಎಂಬ ಬಾಲಕನನ್ನು ಆತನ ಸ್ನೇಹಿತರೇ ಆದ ಮೂವರು ಅಪ್ರಾಪ್ತರು ಚಾಕುವಿನಿಂದ…

Read More

ಅಂಚೆ ಇಲಾಖೆಯ ಅಪಘಾತ ವಿಮೆ: ಮೃತರ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಹುಬ್ಬಳ್ಳಿ/ಧಾರವಾಡ: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಹಾಗೂ ಬಜಾಜ್ ಜನರಲ್ ಇನ್ಸೂರೆನ್ಸ್ ಸಹಭಾಗಿತ್ವದಲ್ಲಿ ಅಪಘಾತ ವಿಮಾ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು. ​ಕಳೆದ ತಿಂಗಳು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರ ಕುಟುಂಬಕ್ಕೆ ಈ ಪರಿಹಾರ ಒದಗಿಸಲಾಗಿದೆ. ಮೃತ ಮಲ್ಲಿಕಾರ್ಜುನ ಅವರು ಅಂಚೆ ಕಚೇರಿಯಲ್ಲಿ ಕೇವಲ ೫೫೭ ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಿದ್ದರು. ಅವರ ಅಕಾಲಿಕ ಮರಣದ ನಂತರ, ಪಾಲಿಸಿಯ ನಾಮಿನಿಯಾಗಿದ್ದ ಪತ್ನಿ…

Read More

ಮಳಲಿ ಬಸವೇಶ್ವರ ದೇವಸ್ಥಾನದ ಅಂದಾಜು 07 ಗುಂಟೆ ಜಾಗ ಗುಳುಂ: ದಾಖಲೆ ತಿದ್ದಿ ಲಕ್ಷಾಂತರ ರೂಪಾಯಿ ಲೂಟಿ ಆರೋಪ? ದಾಖಲೆ ಸಮೇತ ಎಳೆ ಎಳೆಯಾಗಿ ವರದಿ ಬಿಚ್ಚಿಟ್ಟ ಸಿದ್ದಲಿಂಗೇಶ

ಕುಂದಗೋಳ : ತಾಲೂಕಿನ ಮಳಲಿ ಗ್ರಾಮದ ಐತಿಹಾಸಿಕ ಕುಂದಗೋಳ ಬಸವೇಶ್ವರ ಕರಿಹಂಚಿನ ದೇವಾಲಯಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಹಿಂದಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿ, ದಾಖಲೆಗಳನ್ನು ತಿದ್ದುವ ಮೂಲಕ ದೇವಸ್ಥಾನದ ಅಕ್ಕಪಕ್ಕದವರಿಗೆ ಹಗಲು ದರೋಡೆ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ದೇವರ ಆಸ್ತಿ ನುಂಗಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲೆಗಳ ಪ್ರಕಾರ 1961-62 ರಲ್ಲಿ ದೇವಸ್ಥಾನಕ್ಕೆ ಅಂದಾಜು 06 ರಿಂದ 07 ಗುಂಟೆ ಜಾಗವಿತ್ತು. ಆದರೆ 1999 ರಿಂದ ಗ್ರಾಮ…

Read More

ಇಚ್ಛಾಮರಣಕ್ಕೆ ಮುಂದಾಗಿದ್ದ ಕುಬಿಹಾಳ ಗ್ರಾಮದ ಯುವಕನಿಂದ ದಾಖಲೆ ಸಲ್ಲಿಕೆ ವಿಫಲ: ಸುಳ್ಳು ಆರೋಪ ಮಾಡದಂತೆ ನ್ಯಾಯಾಧೀಶರ ಎಚ್ಚರಿಕೆ

ಕುಂದಗೋಳ : ತಾಲೂಕಿನ ಕುಬಿಹಾಳ ಗ್ರಾಮ ಪಂಚಾಯತಿ ಸೇರಿದಂತೆ ಒಟ್ಟು 26 ಪಂಚಾಯತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ರಾಷ್ಟ್ರಪತಿಗಳಿಗೆ ಪತ್ರ ಬರೆದು ಇಚ್ಛಾಮರಣಕ್ಕೆ ಮುಂದಾಗಿದ್ದ ಯುವಕ ನಾಗರಾಜ ಗುರುಶಿದ್ದಪ್ಪ ಹುಬ್ಬಳ್ಳಿ, ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದ ವಿಚಾರಣೆಯ ವೇಳೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದರು. ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ನಾಗರಾಜ,…

Read More

ಪದಕ ವಿಜೇತ ಪರಿಶಿಷ್ಟ ಜಾತಿ/ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ

ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೨೫-೨೬ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ, ಅಧಿಕೃತ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ​೨೦೨೪ನೇ ಕ್ಯಾಲೆಂಡರ್ ವರ್ಷದಲ್ಲಿ (ದಿನಾಂಕ: ೦೧-೦೧-೨೦೨೪ ರಿಂದ ೩೧-೧೨-೨೦೨೪ ರವರೆಗೆ) ನಡೆದ ಅಧಿಕೃತ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ​ಆಸಕ್ತ ಮತ್ತು…

Read More

ಎನ್.ಐ.ಎಸ್ ತರಬೇತಿ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೨೫-೨೬ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ ಎನ್.ಐ.ಎಸ್ (NIS) ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ​ಎನ್.ಐ.ಎಸ್ ಅಡಿಯಲ್ಲಿ ನಡೆಸಲಾಗುವ ಆರು ವಾರಗಳ ಸರ್ಟಿಫಿಕೇಟ್ ಕೋರ್ಸ್ (Six week Certificate Course), ಪಿ.ಜಿ. ಡಿಪ್ಲೋಮಾ (P.G. Diploma) ಮತ್ತು ಎಂ.ಎಸ್.ಸಿ ಸ್ಪೋರ್ಟ್ಸ್ ಕೋಚಿಂಗ್ (M.S.C Sports Coaching) ತರಬೇತಿ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಈ ಸೌಲಭ್ಯ ಪಡೆಯಬಹುದಾಗಿದೆ. ​ಆಸಕ್ತ ಮತ್ತು…

Read More

ನವಲಗುಂದ: ಉಚಿತ ಬ್ಯಾಂಕಿಂಗ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ; ಜ.18 ಅರ್ಜಿ ಸಲ್ಲಿಕೆ ಕೊನೆಯ ದಿನ

ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗಾಗಿ ಉಚಿತ ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 18 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ​ಶಾಂಭವಿ ವಿನೋದ ಅಸೂಟಿ ಟ್ರಸ್ಟ್ ನವಲಗುಂದ ಹಾಗೂ ಧಾರವಾಡದ ಟ್ರ್ಯಾಕ್ ಇಟ್ ಅಕಾಡೆಮಿ (Track It Academy) ಸಹಯೋಗದೊಂದಿಗೆ ಈ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿಂಗ್, ಎಸ್.ಎಸ್.ಸಿ (SSC), ಅಗ್ನಿವೀರ್ ಹಾಗೂ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ….

Read More