ಶಿಕಾರಿಪುರದಲ್ಲಿ ಕಾರು–ಕ್ಯಾಂಟರ್ ಡಿಕ್ಕಿ: ನಾಲ್ವರ ದುರ್ಮರಣ; ಓರ್ವನಿಗೆ ಗಂಭೀರ ಗಾಯ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ಸಮೀಪ ಶುಕ್ರವಾರ ಕಾರು ಹಾಗೂ ಅಡಿಕೆ ತುಂಬಿದ್ದ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಶಿಕಾರಿಪುರ ತಾಲ್ಲೂಕಿನ ಮುತ್ತಗಿ ಗ್ರಾಮದ ನಿವಾಸಿಗಳಾದ ಉಜ್ಜಪ್ಪ (77) ಮತ್ತು ಅವರ ಪತ್ನಿ ಲಲಿತಮ್ಮ (65), ಉಜ್ಜಪ್ಪ ಅವರ ಸಹೋದರಿ ಹಾಗೂ ಹಿರೇಕೆರೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಜಯಮ್ಮ (64)…

