
ನವಲಗುಂದ : ಆಧ್ಯಾತ್ಮಿಕ ಭಾವದ ಮಧ್ಯೆ, ಭಕ್ತಿಯಿಂದ ಸಾಗುತ್ತಿರುವ ಪಂಢರಪುರ ದಿಂಡಿ ಯಾತ್ರೆ 13 ಅಕ್ಟೋಬರ್ 2025ರ ಸೋಮವಾರ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಅಳಗವಾಡಿ ಗ್ರಾಮದಿಂದ ಪ್ರಾರಂಭವಾಗಿ ಗುರುವಾರ ಚಿತ್ರಭಾನಕೊಟ್ಟೆ ತಲುಪಿದೆ. ನವಲಗುಂದ ತಾಲೂಕಿನ ಅಳಗವಾಡಿಯಿಂದ ಪ್ರಾರಂಭವಾದ ಈ ದಿಂಡಿ ಹುಣಸಿಕಟ್ಟೆ, ನರಗುಂದ, ರಾಮದುರ್ಗ ಮತ್ತು ಬಟಕುರ್ಕಿ ಮಾರ್ಗವಾಗಿ ಭಕ್ತಿಯ ನಾದದ ಮಧ್ಯೆ ಚಿತ್ರಭಾನಕೊಟ್ಟೆ ತಲುಪಿದೆ.
ಭಕ್ತರು ಭಜನೆ, ಕೀರ್ತನೆ ಮತ್ತು ದೇವನಾಮ ಸ್ಮರಣೆಯಲ್ಲಿ ತೊಡಗಿ ದಿಂಡಿಯನ್ನು ಪವಿತ್ರ ಯಾತ್ರೆಯಾಗಿ ಪರಿವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ಏಕಾದಶಿಯ ಉಪವಾಸ ಮತ್ತು ಪೂಜೆಯು ಆತ್ಮಾವಲೋಕನ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ ಎಂದು ರಾಮರಡ್ಡಿ ಅಣ್ಣಿಗೇರಿ ಅವರು ಹೇಳಿದರು.
ಫಕೀರಪ್ಪ ಸವದತ್ತಿ ಮಾತನಾಡಿ “ಉಪವಾಸ ಮತ್ತು ಧ್ಯಾನವು ದೇಹದ ಶುದ್ಧೀಕರಣದ ಜೊತೆಗೆ ಆತ್ಮದ ಪರಿಷ್ಕಾರಕ್ಕೂ ಸಹಾಯಕವಾಗಿದೆ. ಇಂತಹ ಆಧ್ಯಾತ್ಮಿಕ ಯಾತ್ರೆಗಳು ಭಕ್ತಿ, ಶ್ರದ್ಧೆ ಮತ್ತು ಶಾಂತಿಯನ್ನು ಬೆಳಸುತ್ತವೆ,” ಎಂದು ಹೇಳಿದರು.
ನಂತರ ಮಾತನಾಡಿದ ಹನುಮಂತಪ್ಪ ಜುಮ್ಮಣ್ಣವರ್ ಏಕಾದಶಿ ದೈವಿಕ ಅನುಗ್ರಹ ನೀಡುತೆ, ಸಾಕ್ಷಾತ್ ಪರಬ್ರಹ್ಮ ಸ್ವರೂಪ ಪಾಂಡುರಂಗನ ಆಶೀರ್ವಾದವನ್ನು ಪಡೆಯಲು ಮತ್ತು ಭಕ್ತಿ ಭಾವವನ್ನು ಹೆಚ್ಚಿಸಲು ಏಕಾದಶಿ ಪೂಜೆ ಸಹಕಾರಿಯಾಗಿದೆ, ಭಕ್ತರ ಉತ್ಸಾಹದ ನಡುವೆ ದಿಂಡಿ ಯಾತ್ರೆ ಮುಂದೆ ಸಾಗುತ್ತ, ಪಂಢರಪುರ ತಲುಪುವವರೆಗೆ ವಿವಿಧ ಸ್ಥಳಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಡಿ.ಎನ್.ಪಾಟೀಲ, ಕಲ್ಲಪ್ಪ ಬೆಳವಣಕಿ, ಗೋಪಾಲ ಅಣ್ಣಿಗೇರಿ, ಬಸವರಾಜ ಹಿರೇಹಾಳ, ಮಲ್ಲಪ್ಪ ರೆಡ್ಡೆರ, ಶಿವಪುತ್ರಪ್ಪ ಕವಳಿಕಾಯಿ, ಮೌನೇಶ ಬಡಿಗೇರ, ಸುರೇಶ ರಾವುತ್, ಶಿವಪ್ಪ ಶಿವಬಸನ್ನರ, ಕೃಷ್ಣಾ ಬೋಸ್ಲೆ, ಮಂಜುನಾಥ ಗೊಂದಳೆ, ಸಂಗಮೇಶ ತಟ್ಟಿ, ಅಶೋಕ್ ಮಾಜಿಗನೂರು, ಬಸವರಾಜ ಹದ್ಲಿ, ಶಿವಪ್ಪ ಗುಡಿಸಾಗರ, ಶೇಖಪ್ಪ ಹೊರಕೇರಿ, ಶಿವಪುತ್ರಪ್ಪ ಕುರಿಯವರ, ಸಂತೋಷ ಹಂಬರ, ರಾಮಕೃಷ್ಣ ಹಂಬರ, ಮಾರುತಿ ಯಾಡ್ರಾವಿ, ಶ್ರೀನಿವಾಸ್ ಕಲಾದಗಿ, ಚನ್ನಪ್ಪ ಕೊಣೂರು, ದುರ್ಗಪ್ಪ ಮಾದರ, ಶ್ರೀಕಾಂತ ತಟ್ಟಿ, ಯಲ್ಲಪ್ಪ ಮುತ್ತಗಿ, ಮಹದೇವಪ್ಪ ಗಾಣಿಗೇರ, ಪುಂಡಲಿಂಗಪ್ಪ ಜಾಲಕಣ್ಣವರ, ಹಣಮಪ್ಪ ಶಿರಕೋಳ, ನಾಗಪ್ಪ ಹಡಪದ, ಗದಿಗೆಪ್ಪ ಗೊಬ್ಬರಗುಂಪಿ, ಗಿರಿಯಪ್ಪ ಹೆಗ್ಗಣ್ಣವರ, ಮಾರುತಿ ಕಡ್ಲಿಕೊಪ್ಪ, ಪಾಂಡು ಪೂಜಾರ, ಬಸವರಾಜ ಶಿವಬಸಣ್ಣವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು….

