ಕುಂದಗೋಳದ ಸಾಲಿಯರ ಪ್ಲಾಟಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಶಾಸಕ ಎಂ ಆರ್ ಪಾಟೀಲ ಚಾಲನೆ

Spread the love

ಕುಂದಗೋಳ: ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅಡಿಯಲ್ಲಿ ಮಂಜೂರಾದ 5 ಲಕ್ಷ ರೂ. ವೆಚ್ಚದ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಕುಂದಗೋಳ ಪಟ್ಟಣದ ಸಾಲಿಯರ ಪ್ಲಾಟಿನಲ್ಲಿ ರವಿವಾರದಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಶಾಸಕ ಎಂ. ಆರ್. ಪಾಟೀಲ್ ಅವರಿಂದ ಚಾಲನೆ
ಸ್ಥಳೀಯ ಶಾಸಕರಾದ ಎಂ. ಆರ್. ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ಸಾಂಸ್ಕೃತಿಕ ಭವನವು ಕ್ಷೇತ್ರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಲಿದೆ. “ಈ ಭವನವು ಸ್ಥಳೀಯ ಕಲಾವಿದರು, ಯುವಕರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಸಭೆ-ಸಮ್ಮೇಳನಗಳನ್ನು ಆಯೋಜಿಸಲು ಮತ್ತು ಜನಸೇವಾ ಕಾರ್ಯಗಳನ್ನು ಮುಂದುವರಿಸಲು ಪ್ರೇರಣೆಯ ಕೇಂದ್ರವಾಗಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಣ್ಣ ಬರಿ, ರೈತ ಮುಖಂಡರಾದ ಹೇಮನಗೌಡ ಪಾಟೀಲ, ಕೆ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಉಮೇಶ ಹೆಬಸೂರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸದಸ್ಯರಾದ ಮಾಲತೇಶ ಶ್ಯಾಗೋಟಿ ಸೇರಿದಂತೆ ಪಟ್ಟಣದ ಗುರು-ಹಿರಿಯರು, ಮುಖಂಡರು ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *