ಬಾಗಲಕೋಟಿ:ಮಹಾಲಿಂಗಪುರದ ಮಹಾಜಾತ್ರೆ – ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಅದ್ದೂರಿ ರಥೋತ್ಸವ
ಮಹಾಲಿಂಗಪುರದ ಮಹಾಜಾತ್ರೆ – ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಅದ್ದೂರಿ ರಥೋತ್ಸವ ಮಹಾಲಿಂಗಪುರ:ಪಟ್ಟಣದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರರ ವಾರ್ಷಿಕ ಮಹಾಜಾತ್ರೆಯ ರಥೋತ್ಸವ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು. ಸಾಂಪ್ರದಾಯಿಕ ಶೈಲಿಯಲ್ಲಿ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದ ರಥಕ್ಕೆ ಶ್ರೀಮಠದ ಪೀಠಾಧಿಪತಿ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಯವರ ಪೂಜೆಯೊಂದಿಗೆ ಸಂಜೆ 7.45ಕ್ಕೆ ಚಾಲನೆ ದೊರೆಯಿತು. ಹರಿವಾನ ಕಟ್ಟೆ ಲೂಟಿ – ಭಕ್ತರ ಹರ್ಷೋದ್ಘಾರ ರಥೋತ್ಸವಕ್ಕೂ ಮುನ್ನ ಸಂಪ್ರದಾಯಬದ್ಧ ಹರಿವಾನ ಕಟ್ಟೆ ಲೂಟಿ ಭಕ್ತರಲ್ಲಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು….

