ಶೋಷಿತರ ಶೌರ್ಯದ ಸಂಕೇತ ಭೀಮಾ ಕೋರೆಗಾಂವ್ ವಿಜಯೋತ್ಸವ: ಮೇಯರ್ ಜ್ಯೋತಿ ಪಾಟೀಲ
ಹುಬ್ಬಳ್ಳಿ: ಭೀಮಾ ಕೋರೆಗಾಂವ್ ಯುದ್ಧವು ಭಾರತದ ಜಾತಿ ವ್ಯವಸ್ಥೆಯಲ್ಲಿ ನಲುಗಿಹೋದ ಶೋಷಿತ ಸಮುದಾಯವು ಶೌರ್ಯದಿಂದ ಜಯಿಸಿದ ಮಹಾನ್ ಹೋರಾಟವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರು ಬಣ್ಣಿಸಿದರು. ನಗರದ ಸಿದ್ಧಾರ್ಥ ಸರ್ಕಲ್‌ನಲ್ಲಿ ಸಮತಾ ಸೈನಿಕ ದಳ ಹಾಗೂ ಹುಬ್ಬಳ್ಳಿ-ಧಾರವಾಡ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಹಾಗೂ ಹಿರಿಯ ಮುಖಂಡ ಆಯುಷ್ಮಾನ್ ಪಿತಾಂಬರಪ್ಪ ಬಿಳಾರ ಅವರ 73ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 1818ರ…

