ಹು-ಧಾ ಪಾಲಿಕೆಯಲ್ಲಿ ರಂಪಾಟ: ಹುದ್ದೆಗಳ ಕೊರತೆ, ಶ್ವಾನಗಳ ಹಾವಳಿ, ಅಕ್ಕಾ ಕೆಫೆ ನಿರ್ಮಾಣಕ್ಕೆ ಆಕ್ರೋಶ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಸೋಮವಾರ ಗೊಂದಲ ಮತ್ತು ಜಟಾಪಟಿಯಿಂದ ಕೂಡಿದ್ದು, ವಿವಿಧ ವಿಷಯಗಳ ಬಗ್ಗೆ ಸದಸ್ಯರು ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಹುದ್ದೆಗಳು ಖಾಲಿ ಇರುವುದು, ಬೀದಿ ನಾಯಿಗಳ ಹಾವಳಿ ಮತ್ತು ಟೌನ್ ಹಾಲ್‌ನಲ್ಲಿ ‘ಅಕ್ಕಾ ಕೆಫೆ’ ನಿರ್ಮಾಣದಂತಹ ವಿಷಯಗಳು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು. ಖಾಲಿ ಹುದ್ದೆಗಳ ಭರಾಟೆ: ಅಧಿಕಾರಿಗಳಿಗೆ ಸದಸ್ಯರ ತರಾಟೆಪಾಲಿಕೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿರುವ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ…
