ಠೇವಣಿ ಹಣ ಮರಳಿಸದ ಸೊಸೈಟಿಗೆ ದಂಡ ಮತ್ತು ಪರಿಹಾರ: ಗ್ರಾಹಕ ಆಯೋಗದ ಆದೇಶ
ಹುಬ್ಬಳ್ಳಿ: ನಗರದ ಕಿತ್ತೂರು ರಾಣಿ ಚೆನ್ನಮ್ಮ ಕೋ-ಆಪರೇಟಿವ್ ಸೊಸೈಟಿಯು ಒಂದೇ ಕುಟುಂಬದ ಸದಸ್ಯರು ಠೇವಣಿ ಇಟ್ಟಿದ್ದ ಹಣವನ್ನು ಹಿಂದಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ, ಜಿಲ್ಲಾ ಗ್ರಾಹಕರ ಆಯೋಗವು ಸೊಸೈಟಿಗೆ ದಂಡ ವಿಧಿಸಿ, ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಹುಬ್ಬಳ್ಳಿಯ ಸೆಂಟ್ರಲ್ ಎಕ್ಸೈಸ್ ಕಾಲೋನಿಯ ನಿವಾಸಿಗಳಾದ ಅಶೋಕ ಅನ್ವೇಕರ್, ರೇಖಾ ಅನ್ವೇಕರ್, ಸುಮಾ ವಿಠ್ಠಲಕರ್ ಮತ್ತು ಅವರ ಮಗಳು ನಿಸ್ಮಿತಾ ವಿಠ್ಠಲಕರ್, ಈ ಸೊಸೈಟಿಯಲ್ಲಿ ಒಟ್ಟು ₹36.50 ಲಕ್ಷ ಹಣವನ್ನು ಠೇವಣಿ ಇಟ್ಟಿದ್ದರು. ಕೆಲವು ಠೇವಣಿಗಳ ಅವಧಿ ಮುಕ್ತಾಯವಾಗಿದ್ದರೂ ಮತ್ತು ಕೆಲವು…

