ಕೃಷಿ ಮೇಳ ಸಿದ್ಧತೆ ಪರಿಶೀಲಿಸಿದ ಸಚಿವ ಸಂತೋಷ ಲಾಡ್
ಧಾರವಾಡ: ಸೆಪ್ಟೆಂಬರ್ 13 ರಿಂದ 16 ರವರೆಗೆ ನಡೆಯಲಿರುವ ಧಾರವಾಡ ಕೃಷಿ ಮೇಳದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮಂಗಳವಾರ ವೀಕ್ಷಿಸಿದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಮೇಳದ ಸಿದ್ಧತೆಗಳ ಬಗ್ಗೆ ಅವರು ವಿಶ್ವವಿದ್ಯಾಲಯದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಸ್ಟಾಲ್‌ಗಳ ಅಳವಡಿಕೆ, ಜಾನುವಾರು ಮತ್ತು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮಳಿಗೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮುಖ್ಯ ವೇದಿಕೆಯ ಸಿದ್ಧತೆಗಳ ಕುರಿತು ಸಚಿವರು ಪರಿಶೀಲನೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು. ಕೃಷಿ ವಿಶ್ವವಿದ್ಯಾಲಯದ…

