ಅಳಗವಾಡಿ ಗ್ರಾಮದಲ್ಲಿ ಸಂಭ್ರಮದ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಉತ್ಸವ ಸಂಪನ್ನ
ನವಲಗುಂದ: ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಕಳೆದ ಏಳು ದಿನಗಳಿಂದ ಅತ್ಯಂತ ಭಕ್ತಿಭಾವದಿಂದ ಜರುಗುತ್ತಿದ್ದ 13ನೇ ವರ್ಷದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಉತ್ಸವವು ಗುರುವಾರ ಸಡಗರದೊಂದಿಗೆ ಸಮಾರೋಪಗೊಂಡಿತು. ವಾರಕರಿ ಸಂಪ್ರದಾಯದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ಈ ಉತ್ಸವವು ಗ್ರಾಮದಾದ್ಯಂತ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿತ್ತು. ಉತ್ಸವದ ಅವಧಿಯಲ್ಲಿ ಭಕ್ತಾದಿಗಳು ತಾಳ, ಮೃದಂಗಗಳ ನಾದದೊಂದಿಗೆ ಶ್ರೀ ಜ್ಞಾನೇಶ್ವರ ಮಾವುಲಿಯ ಪಾರಾಯಣವನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಿದರು. ಶಿರಕೋಳದ ಶ್ರೀ ಹ.ಭ.ಪ. ರಾಮಕೃಷ್ಣ ಸಂಬರ ಆಚಾರ್ಯರು ವ್ಯಾಸಪೀಠವನ್ನು ಅಲಂಕರಿಸಿ ಪಾರಾಯಣವನ್ನು…

