ಇನಾಂವೀರಾಪುರ ದೌರ್ಜನ್ಯ ಪ್ರಕರಣ: ವಿವೇಕಾನಂದ ಆಸ್ಪತ್ರೆ ಹಾಗೂ ಗ್ರಾಮಕ್ಕೆ ಜಾಗೃತ ಮತ್ತು ಉಸ್ತುವಾರಿ ಸಮಿತಿ ತಂಡ ಭೇಟಿ
ಹುಬ್ಬಳ್ಳಿ: ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಕುಟುಂಬದ ಮೇಲಿನ ಭೀಕರ ದೌರ್ಜನ್ಯದ ಹಿನ್ನೆಲೆಯಲ್ಲಿ, ಜಿಲ್ಲಾ ಹಾಗೂ ಉಪವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರ ತಂಡವು ಸಂತ್ರಸ್ತರಿಗೆ ಸಾಂತ್ವನ ನೀಡಲು ಬುದುವಾರದಂದು ಭೇಟಿ ನೀಡಿತು. ಸಮಿತಿಯ ಸದಸ್ಯರು ಮೊದಲು ಹುಬ್ಬಳ್ಳಿ ನಗರದ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ, ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ಗಾಯಾಳುಗಳಿಂದ ಮಾಹಿತಿ ಪಡೆದ ತಂಡವು, ಅವರಿಗೆ ಧೈರ್ಯ ತುಂಬುವ ಕೆಲಸ…

