ಸಂವಿಧಾನದ ಆದರ್ಶಗಳು ನಮ್ಮನ್ನು ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯಲಿ: ಮುತ್ತಪ್ಪ ಬಿಸನಾಳ
ನವಲಗುಂದ: ಭಾರತವು ವಸಾಹತುಶಾಹಿ ಆಡಳಿತದಿಂದ ಮುಕ್ತವಾಗಿ, ಔಪಚಾರಿಕವಾಗಿ ಗಣರಾಜ್ಯವಾಗಿ ಘೋಷಿತವಾದ ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಸಂವಿಧಾನದ ಉನ್ನತ ಆದರ್ಶಗಳು ನಮ್ಮನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯಲಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಬಿಸನಾಳ ಆಶಯ ವ್ಯಕ್ತಪಡಿಸಿದರು. ಪಟ್ಟಣದ ಹಳ್ಳದ ಓಣಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತೀಯರೆಲ್ಲರೂ ಏಕತೆಯ ಭಾವನೆಯೊಂದಿಗೆ ದೇಶದ ಪ್ರಗತಿಯ ಹಾದಿಯಲ್ಲಿ ಹೆಜ್ಜೆ ಹಾಕೋಣ ಎಂದು ಕರೆ…

