ಎಚ್ಚರ! ಸರ್ಕಾರಿ ನೌಕರರು, ಐಟಿ ಪಾವತಿದಾರರು, 7 ಹೆಕ್ಟೇರ್ ಭೂಮಿ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಖಚಿತ?
ಅನರ್ಹರ ಪತ್ತೆಗೆ ಆಹಾರ ಇಲಾಖೆಯಿಂದ ದತ್ತಾಂಶ ಶುದ್ಧೀಕರಣ; ಸುಳ್ಳು ಮಾಹಿತಿ ನೀಡಿದವರಿಗೆ ಭಾರೀ ದಂಡದ ಎಚ್ಚರಿಕೆ ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ನೀಡಲಾಗುವ ಪಡಿತರ ಚೀಟಿಗಳ ದುರ್ಬಳಕೆ ತಡೆಯಲು ರಾಜ್ಯ ಸರ್ಕಾರ ಸಮರ ಸಾರಿದ್ದು, ನಿರ್ದಿಷ್ಟ 9 ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಡ್ ಪಡೆದಿರುವ ಲಕ್ಷಾಂತರ ಅನರ್ಹರ ಕಾರ್ಡ್‌ಗಳನ್ನು ರದ್ದುಗೊಳಿಸುವ ಅಥವಾ ಎಪಿಎಲ್‌ಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚುರುಕುಗೊಳಿಸಿದೆ. ನಿಜವಾದ ಬಡವರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಈ ದತ್ತಾಂಶ…

