ನೇಪಾಳ: ಸಾಮಾಜಿಕ ಜಾಲತಾಣ ನಿಷೇಧ ವಿರೋಧಿಸಿ ಪ್ರತಿಭಟನೆ: 19 ಮಂದಿ ಬಲಿ, ದಂಗೆಗೆ ತಿರುಗಿದ ಪ್ರತಿಭಟನೆಗಳು
ಕಠ್ಮಂಡು: ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುವಂತಿದ್ದ ಸರ್ಕಾರದ ನಿಲುವುಗಳ ವಿರುದ್ಧ ನೇಪಾಳದಲ್ಲಿ ಜ್ವಾಲಾಮುಖಿ ಭುಗಿಲೆದ್ದಿದೆ. ರಾಜಕೀಯ ಭ್ರಷ್ಟಾಚಾರ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ ನಿಷೇಧವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಗಳು, ಭದ್ರತಾ ಪಡೆಗಳ ಜೊತೆಗಿನ ಘರ್ಷಣೆಗೆ ಕಾರಣವಾಗಿ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ. ಘಟನೆ ಹಿನ್ನೆಲೆ:ಸರ್ಕಾರದ ನಿರಂತರ ಭ್ರಷ್ಟಾಚಾರ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಕ್ರಮಗಳ ವಿರುದ್ಧ ನೇಪಾಳದ ಯುವ ಸಮುದಾಯ (ಜೆನರೇಷನ್ Z) ಅಸಮಾಧಾನಗೊಂಡಿತ್ತು. ಇತ್ತೀಚೆಗೆ ಸರ್ಕಾರವು ಫೇಸ್‌ಬುಕ್, ಎಕ್ಸ್ ಮತ್ತು ಯೂಟ್ಯೂಬ್…

