ಗಣೇಶ ಮೂರ್ತಿಗೆ ವಿದ್ಯುತ್ ತಗುಲಿ 10ಕ್ಕೂ ಹೆಚ್ಚು ಜನರು ಸಾವು ತೆಲಂಗಾಣದ ವಿಡಿಯೋ ವೈರಲ್

ತೆಲಂಗಾಣದಲ್ಲಿ: ಗಣೇಶ ಮೂರ್ತಿಗೆ ವಿದ್ಯುತ್ ತಗುಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ದುರಂತದ ಕುರಿತು: ಮಹಾವೀರ ಜೈನ ಎಂಬುವವರು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೇವಲ ಅಪಘಾತವಲ್ಲ, ಬದಲಾಗಿ ನಮ್ಮೆಲ್ಲರ ಬೇಜವಾಬ್ದಾರಿಯ ಪರಿಣಾಮ ಎಂದು ಅವರು ಆತಂಕದಿಂದ ಹೇಳಿದ್ದಾರೆ. ಮಹಾವೀರ ಜೈನ ಅವರು, ಹಬ್ಬದ ಸಂಭ್ರಮದ ನಡುವೆಯೂ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಬಾರದು ಎಂದು ಗಣೇಶ ಮಂಡಳಿಗಳು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ಜೀವದ ಮೌಲ್ಯ ಯಾವುದೇ ಹಬ್ಬಕ್ಕಿಂತಲೂ ದೊಡ್ಡದು…

Read More

ತಲಪಾಡಿಯಲ್ಲಿ ಭೀಕರ ಅಪಘಾತ ಆಟೋ-ಬಸ್ ಡಿಕ್ಕಿ: ನಾಲ್ವರು ಮಹಿಳೆಯರು, ಮಗು ಸೇರಿ ಆರು ಜನ ಸ್ಥಳದಲ್ಲೇ ದುರ್ಮರಣಆಟೋ ಚಾಲಕನ ಸ್ಥಿತಿ ಚಿಂತಾಜನಕ

ಮಂಗಳೂರು, ಆ.28 – ಮಂಗಳೂರಿನ ಉಳ್ಳಾಲ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ಆರುಬಜನ ಮೃತಪಟ್ಟಿರುವ ದುಃಖದ ಸುದ್ದಿ ವರದಿಯಾಗಿದೆ. ಮಧ್ಯಾಹ್ನದ ವೇಳೆ ಕೆಸಿ ರೋಡ್ ದಿಕ್ಕಿನಿಂದ ತೆರಳುತ್ತಿದ್ದ ಆಟೋ ರಿಕ್ಷಾ ಮತ್ತು ಬಸ್ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ರಿಕ್ಷಾ ಸಂಪೂರ್ಣ ಚೂರುಚೂರುಗೊಂಡಿದ್ದು, ಒಳಗಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಒಂದು ಮಗು ಸೇರಿ ಒಟ್ಟು 06, ಜನ, ಇವರು…

Read More

ವಡೋದರಾದಲ್ಲಿ ಗಣೇಶ ಚತುರ್ಥಿ ವೇಳೆ ಗಣೇಶ ವಿಗ್ರಹಕ್ಕೆ ಮೊಟ್ಟೆ ಎಸೆದ ಕಿಡಿಗೇಡಿಗಳಿಗೆ ಕೈ ಹಗ್ಗ ಕಟ್ಟಿ ಸಾರ್ವಜನಿಕವಾಗಿ ಊರೆಲ್ಲ ಮೆರವಣಿಗೆ

ವಡೋದರ (ಗುಜರಾತ್), ಆ.28 – ವಡೋದರ ನಗರದ ಸತ್ಯವಿಸ್ತಾರ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಗಣೇಶ ಚತುರ್ಥಿಯ ಮೆರವಣಿಗೆಯ ಸಂದರ್ಭದಲ್ಲಿ ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಮೊಟ್ಟೆ ಎಸೆದ ಹೀನ ಕೃತ್ಯದಿಂದ ನಗರದಲ್ಲಿ ತೀವ್ರ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಅಮಾನುಷ ಕೃತ್ಯವು ಭಕ್ತರಲ್ಲಿ ಆಕ್ರೋಶ ಉಂಟುಮಾಡಿದೆ. ಪೊಲೀಸ್ ಆಯುಕ್ತ ನರಸಿಂಹ ಕೋಮರ್ ಅವರ ಆದೇಶದ ಮೇರೆಗೆ, ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಬಂಧಿಸಿದರು. ಬಂಧಿತ ಆರೋಪಿಗಳಲ್ಲಿ ಸುಫಿಯಾನ್ ಅಲಿಯಾಸ್ ಗಾಮಾ ಸಲೀಂಬಾಯಿ ಮನ್ಸೂರಿ, ಶಹನವಾಜ್ ಅಲಿಯಾಸ್…

Read More

ಮಹಾರಾಷ್ಟ್ರ ಪಲ್ಘಾರ್: ಕಳಪೆ ಕಟ್ಟಡ ಕುಸಿತಕ್ಕೆ 6 ಬಲಿ, 8 ಗಾಯ

ಪಲ್ಘಾರ್ (ಮಹಾರಾಷ್ಟ್ರ): ನಿರ್ಮಾಣದ ಕಳಪೆ ಗುಣಮಟ್ಟ ಮತ್ತು ಅನಧಿಕೃತ ಕಟ್ಟಡಗಳ ನಿರ್ಲಕ್ಷ್ಯವು ಮತ್ತೊಮ್ಮೆ ಭೀಕರ ದುರಂತಕ್ಕೆ ಕಾರಣವಾಗಿದೆ. ಇಲ್ಲಿನ ವಿರಾರ್ ಪಟ್ಟಣದಲ್ಲಿ ಅನಧಿಕೃತ ನಾಲ್ಕು ಮಹಡಿಗಳ ಕಟ್ಟಡವೊಂದು ಕುಸಿದು, ಪಕ್ಕದ ಕಟ್ಟಡದ ಮೇಲೆ ಬಿದ್ದ ಪರಿಣಾಮ ಆರು ಮಂದಿ ದುರಂತ ಅಂತ್ಯ ಕಂಡಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ತಡರಾತ್ರಿ 12.05ರ ಸುಮಾರಿಗೆ ‘ರಮಾಬಾಯಿ ಅಪಾರ್ಟ್‌ಮೆಂಟ್’‌ನ ಹಿಂಭಾಗವು ದಿಢೀರನೆ ಕುಸಿದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡವು…

Read More

ಚಳ್ಳಕೆರೆ ಪೊಲೀಸರಿಂದ ಕಳ್ಳನ ಬಂಧನ: 24 ಗಂಟೆಯೊಳಗೆ 97 ಲಕ್ಷ ರೂ. ವಶ!

ಚಿತ್ರದುರ್ಗ: ಕೇವಲ ಊಟಕ್ಕೆಂದು ಕಾರು ನಿಲ್ಲಿಸಿ ಹೋದಾಗ, ಕಾರು ಚಾಲಕನೇ ಅದರಲ್ಲಿದ್ದ ಕೋಟಿಗೆ ಸಮೀಪದ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದನು. ಆದರೆ, ಈ ಕಳ್ಳತನದ ಪ್ರಕರಣ ದಾಖಲಾದ 24 ಗಂಟೆಯೊಳಗೇ ಚಳ್ಳಕೆರೆ ಪೊಲೀಸರು ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಬರೋಬ್ಬರಿ 96,96,800 ರೂ. ಹಣ ವಶಪಡಿಸಿಕೊಂಡಿದ್ದು, ತಕ್ಷಣದ ನ್ಯಾಯ ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆ ಪೊಲೀಸರ ದಕ್ಷತೆಗೆ ಹಿಡಿದ ಕನ್ನಡಿಯಾಗಿದ್ದು, ಅಪರಾಧಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದೆ. ಘಟನೆಯ ವಿವರಕಳೆದ ಮಂಗಳವಾರ (ಆಗಸ್ಟ್ 26) ಚಳ್ಳಕೆರೆಯ…

Read More

ರಾಗಿ ಮುದ್ದೆಗೆ ನಿದ್ರೆ ಮಾತ್ರೆ ಬೆರೆಸಿ ಅತ್ತೆಯ ಕೊಲೆ: ಸೊಸೆ, ಪ್ರಿಯಕರ ಬಂಧನ

ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಅಸಹ್ಯಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಸೊಸೆಯೊಬ್ಬಳು ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೊಸೆ ಅಶ್ವಿನಿ ಮತ್ತು ಆಕೆಯ ಪ್ರಿಯಕರ ಆಂಜನೇಯನನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯೇನು?ಆಗಸ್ಟ್‌ 10ರಂದು ಅತ್ತೆ ದೇವಿರಮ್ಮ ಮೃತಪಟ್ಟಾಗ, ಕುಟುಂಬದವರು ಇದೊಂದು ಸಹಜ ಸಾವು ಎಂದು ತಿಳಿದು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ಕೆಲವೇ ದಿನಗಳಲ್ಲಿ…

Read More

ವರದಕ್ಷಿಣೆಗಾಗಿ ಮಹಿಳೆಯ ಭೀಕರ ಕೊಲೆ: ತೆಲಂಗಾಣದಲ್ಲಿ ಘೋರ ದುರಂತ

ತೆಲಂಗಾಣ: ವರದಕ್ಷಿಣೆಗಾಗಿ ಪತ್ನಿಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿದ ನೋಯ್ಡಾ ಘಟನೆಯ ದುಃಖ ಇನ್ನೂ ಮಾಸುವ ಮುನ್ನವೇ, ಅದೇ ರೀತಿಯ ಮತ್ತೊಂದು ಕ್ರೂರ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಕೊಥಗುಡೆಮ್ ಜಿಲ್ಲೆಯಲ್ಲಿ 33 ವರ್ಷದ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಖಮ್ಮಂ ಜಿಲ್ಲೆಯ ವಿಶ್ವನಾಥಪುರದವರಾದ ಲಕ್ಷ್ಮಿ ಪ್ರಸನ್ನ ಅವರ ವಿವಾಹ 2015ರಲ್ಲಿ ಖಾನಖಾನಪೇಟೆಯ ಪೂಲ ನರೇಶ್ ಬಾಬು ಅವರೊಂದಿಗೆ ನಡೆದಿತ್ತು. ಮದುವೆಯ ಸಮಯದಲ್ಲಿ ಲಕ್ಷ್ಮಿ ಅವರ ಕುಟುಂಬ ವರದಕ್ಷಿಣೆಯಾಗಿ ಎರಡು…

Read More

ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿ: 8 ಸಾವು, 43 ಮಂದಿಗೆ ಗಾಯ

ಲಖನೌ: ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 43 ಮಂದಿ ಗಾಯಗೊಂಡಿರುವ ದುರಂತ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.ಬುಲಂದ್‌ಶಹರ್-ಅಲಿಗಢ ಗಡಿಯಲ್ಲಿರುವ ಅರ್ನಿಯಾ ಬೈಪಾಸ್ ಬಳಿ ಬೆಳಗಿನ ಜಾವ 2.10ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್ ಟ್ರಕ್ ಹಿಂಬದಿಯಿಂದ ಟ್ರ್ಯಾಕ್ಟರ್‌ ಟ್ರಾಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟ್ರಾಲಿ ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ತೀರ್ಥಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳು:ಟ್ರಾಕ್ಟರ್…

Read More

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು

ಧಾರವಾಡ: ತಾಲೂಕಿನ ಶಿಂಗನಹಳ್ಳಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಮೃತ ಪಾದಚಾರಿಯನ್ನು ಹೂವಿನಹಡಗಲಿ ಮೂಲದ ಹೊನ್ನಪ್ಪ (46) ಎಂದು ಗುರುತಿಸಲಾಗಿದೆ. ಘಟನೆಯ ವಿವರಗಳು ಹೀಗಿವೆ:ಬೆಳಗಾವಿಯಿಂದ ಧಾರವಾಡದತ್ತ ಬರುತ್ತಿದ್ದ ಲಾರಿಯು ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಹೊನ್ನಪ್ಪ ಅವರಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಹೊನ್ನಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಗರಗ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ…

Read More

ಸಾವಿನಲ್ಲೂ ಒಂದಾದ ನಂದಿಹಳ್ಳಿ ಗ್ರಾಮದ ದಂಪತಿ: ಪತಿಯ ಅಂತ್ಯಕ್ರಿಯೆಯಲ್ಲೇ ಪತ್ನಿ ಸಾವು

ಹಾವೇರಿ: “ಜೊತೆಯಾಗಿ ಬಾಳೋಣ, ಜೊತೆಯಾಗಿ ಸಾಯೋಣ” ಎಂಬ ಮಾತುಗಳೇ ಬದುಕು ಹಾಗೂ ಸಾವಿನಲ್ಲಿ ಅಕ್ಷರಶಃ ಸತ್ಯವಾಗಿವೆ. ಪತಿಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗಲೇ ಪತ್ನಿಯೂ ಕುಸಿದು ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.ಮೃತಪಟ್ಟ ದಂಪತಿಯನ್ನು ವೀರಬಸಪ್ಪ ಗೋಣಿಗೇರ (70) ಮತ್ತು ಬಸಮ್ಮ (60) ಎಂದು ಗುರುತಿಸಲಾಗಿದೆ. ಈ ದಂಪತಿ ಹಲವು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದರು. ಘಟನೆಯ ವಿವರ:ಭಾನುವಾರ ಬೆಳಿಗ್ಗೆ ವೀರಬಸಪ್ಪ ಅವರು…

Read More