
ನವಲಗುಂದ: ಬ್ಯಾಲಿಳ ಗ್ರಾಮದ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ರೈತರಾದ ದಿ. ಪ್ರಕಾಶ ಪಟ್ಟಣಶೆಟ್ಟಿ ಅವರ ಪುತ್ರಿ ಸುಧಾ ಪ್ರಕಾಶ ಪಟ್ಟಣಶೆಟ್ಟಿ ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುಕುಲ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ದೇವರಾಜ್ ಬಿ. ದಾಡಿಬಾವಿ ಅವರು ಅವರನ್ನು ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗುರಪ್ಪ ಈರೆಶನವರ, ಉಮೇಶ ಧಾರವಾಡ, ಪರಮೇಶ್ವರ ಪಟ್ಟಣಶೆಟ್ಟಿ, ಸಂಗಮೇಶ ಮುತ್ತಗಿ, ಬಸನಗೌಡ ಪಾಟೀಲ, ಬಸವರಾಜ ಸವದಿ, ರಾಜಣ್ಣ ಶಿವಪ್ಪಯ್ಯನವರ, ಗಂಗಪ್ಪ ತಳವಾರ, ಈರಣ್ಣ ಮೆಣಸಿನಕಾಯಿ, ಮಡಿವಾಳಿ ಬೆಟಿಗೇರಿ, ಚಂದ್ರು ಕಿತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗ್ರಾಮಸ್ಥರು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಸುಧಾ ಪ್ರಕಾಶ ಪಟ್ಟಣಶೆಟ್ಟಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿ, ಮುಂದಿನ ಕರ್ತವ್ಯಗಳಲ್ಲಿ ಯಶಸ್ಸು ಕೋರಿ ಶುಭ ಹಾರೈಸಿದರು.

