ರಸ್ತೆಯೇ ಹೈಟೆಕ್ ಸಭಾಂಗಣ: ಮುಂಬೈ ಬೀದಿಗಳಲ್ಲಿ ಮೋದಿ-ಮ್ಯಾಕ್ರನ್ ಸಮಾಲೋಚನೆ!

Spread the love

ಮುಂಬೈ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಸ್ನೇಹ ಮತ್ತು ಕಾರ್ಯವೈಖರಿ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಮುಂಬೈನ ಲೋಕ ಭವನದಲ್ಲಿ ನಡೆದ ಸುದೀರ್ಘ ಚರ್ಚೆ ಹಾಗೂ ಜಂಟಿ ಪತ್ರಿಕಾ ಗೋಷ್ಠಿಯ ಬಳಿಕ, ಈ ಉಭಯ ನಾಯಕರು ತಮ್ಮ ಮುಂದಿನ ಕಾರ್ಯಕ್ರಮಗಳತ್ತ ತೆರಳುವ ಮಾರ್ಗಮಧ್ಯೆ ಕಾರಿನಲ್ಲೇ ಗಂಭೀರ ಸಮಾಲೋಚನೆ ನಡೆಸುವ ಮೂಲಕ ರಸ್ತೆಯನ್ನೇ ಹೈಟೆಕ್ ಕಾನ್ಫರೆನ್ಸ್ ರೂಮ್ ಆಗಿ ಬದಲಿಸಿದ್ದಾರೆ.

​ಉಭಯ ನಾಯಕರು ಲೋಕ ಭವನದಿಂದ ‘ಇಂಡಿಯಾ-ಫ್ರಾನ್ಸ್ ಇನ್ನೋವೇಶನ್ ಫೋರಂ’ (ಭಾರತ-ಫ್ರಾನ್ಸ್ ನಾವೀನ್ಯತಾ ವೇದಿಕೆ) ಸೇರಿದಂತೆ ತಮ್ಮ ಮುಂದಿನ ಕಾರ್ಯಕ್ರಮಗಳಿಗೆ ತೆರಳುತ್ತಿದ್ದ ವೇಳೆ ಈ ದೃಶ್ಯ ಕಂಡುಬಂತು. ಸಮಯದ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರಿನಲ್ಲೇ ಚರ್ಚೆ ಮುಂದುವರಿಸಿದ ನಾಯಕರು, ಉಭಯ ದೇಶಗಳ ನಡುವಿನ ತಾಂತ್ರಿಕ ಮತ್ತು ರಾಜತಾಂತ್ರಿಕ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಅವರ ಈ ಕಾರ್ಯತತ್ಪರತೆ ಮತ್ತು ಬಾಂಧವ್ಯವು ಭಾರತ ಹಾಗೂ ಫ್ರಾನ್ಸ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *